ಅಕ್ರಮ ಗಣಿಗಾರಿಕೆಗೆ ಪೊಲೀಸ್‌ ದಾಳಿ

ಕಾರ್ಕಳ : ಎರ್ಲಪಾಡಿ ಗ್ರಾಮದ ಜಾರ್ಕಳದಲ್ಲಿ ಸರಕಾರಿ ಜಾಗ 181/1 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಅಕ್ರಮವಾಗಿ ಗಣಿಕಾರಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಜು. 19ರಂದು ಕಾರ್ಕಳ ನಗರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು ಪರಿಶೀಲಿಸಿದಾಗ ಸುರೇಂದ್ರ ಹಾಗೂ KA 16 8785ನೇ ಟಿಪ್ಪರ್‌ ಲಾರಿ ಚಾಲಕ ಮತ್ತು ಕೆಎ20 MF 9452 ಜೆಸಿಬಿ ಚಾಲಕ ಸೇರಿಕೊಂಡು ಯಾವುದೇ ಪರವಾನಿಗೆಯನ್ನು ಹೊಂದದೆ ಅಕ್ರಮವವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ತಿಳಿದು ಬಂದಿರುತ್ತದೆ. ಮೂವರ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.







































error: Content is protected !!
Scroll to Top