ಕಾರ್ಕಳ : ಬೆಂಗಳೂರಿನ ಸಂಚಾರಿ ಕಲಾ ಪರಿಷತ್ ನಡೆಸಿದ ಭರತ ನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಅನ್ವಿ ಹೆಚ್. ಅಂಚನ್ ಮತ್ತು ಅನುಜ್ಞಾ ಎನ್. ರಾವ್ ಶೇ. 90 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ವಿದುಷಿ ಸುಶ್ಮಿತಾ ನೀರೇಶ್ವಲಾಯ ಇವರ ಕಾರ್ಕಳ ಪುಲ್ಕೇರಿ ಶಾಂತಿ ನೃತ್ಯ ನಿಕೇತನದಲ್ಲಿ ಭರತನಾಟ್ಯ ತರಬೇತಿ ಪಡೆಯುತಿದ್ದಾರೆ. ಈ ತರಬೇತಿ ಶಾಲೆಯ 17 ಮಂದಿ ಈ ಬಾರಿ ಜೂನಿಯರ್ ಪರೀಕ್ಷೆ ಬರೆದಿದ್ದು, ಇವರಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಉಳಿದ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆ ಹೊಂದಿರುತ್ತಾರೆ. ಸೀನಿಯರ್ ವಿಭಾಗದಲ್ಲಿ ಸಮೃದ್ಧಿ ಶೆಟ್ಟಿ ಶೇ. 82 ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.
ಅನ್ವಿ ಹೆಚ್. ಅಂಚನ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್ಸೆಸೆಲ್ಸಿ ಹಾಗೂ ಅನುಜ್ಞಾ ಎನ್. ರಾವ್ ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.


























