ಗಾಯತ್ರಿ ಎಕ್ಸ್ ಪೋರ್ಟ್ಸ್‌ಗೆ ಕಚ್ಚಾ ಗೇರು ಬೀಜ ನೀಡುವುದಾಗಿ ಲಕ್ಷಾಂತರ ರೂ. ವಂಚನೆ

ಕಾರ್ಕಳ : ನಿಟ್ಟೆ ಗ್ರಾಮದ ಗುಂಡ್ಯಡ್ಕದಲ್ಲಿರುವ ಗಾಯತ್ರಿ ಎಕ್ಸ್ ಪೋರ್ಟ್ಸ್‌ಗೆ ಕಚ್ಚಾ ಗೇರು ಬೀಜ ನೀಡುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಸಂಭವಿಸಿದೆ.
ಬಿ. ಶ್ರೀನಿವಾಸ ಅವರು ಗಾಯತ್ರಿ ಎಕ್ಸ್ ಪೋರ್ಟ್ಸ್‌ನ ಮ್ಯಾನೆಜಿಂಗ್ ಪಾರ್ಟನರ್ ಆಗಿದ್ದು ಗೇರು ಬೀಜ ರಫ್ತು ಮಾಡುವ ಉದ್ದಿಮೆ ನಡೆಸಿಕೊಂಡಿರುತ್ತಾರೆ. ಇವರು ಸಿಂಗಾಪುರದ Amari Enterprises, PTE Ltd & Hawkeye Associates PTE Ltd. ನ ಪ್ರೊಪೈಟರ್‌ ಬಿಪಿನ್ ಜಾ ಎಂಬಾತನೊಂದಿಗೆ 2023ರ ಜೂ. 21ರಂದು ಕಚ್ಚಾ ಗೋಡಂಬಿ ಖರೀದಿ ಮಾಡುವ ಬಗ್ಗೆ ಕರಾರು ಪತ್ರ ಮಾಡಿಕೊಂಡಿದ್ದು, 2023ರ ಜೂ. 26ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಕಳ ಬ್ರಾಂಚ್‌ನಿಂದ 17,08,938 ರೂ. ಹಣವನ್ನು ಆಪಾದಿತ ಬಿಪಿನ್ ಜಾನ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಿಪಿನ್ ಜಾ ಕೇರಳ ನಿವಾಸಿ ಸುರೇಶ್ ಎಂಬಾತನ ಜೊತೆ ಸೇರಿಕೊಂಡು ಕರಾರಿನಲ್ಲಿ ಮಾಡಿಕೊಂಡ ಒಪ್ಪಂದದಂತೆ ಶ್ರೀನಿವಾಸ್‌ ಅವರಿಗೆ ಕಚ್ಚಾ ಗೋಡಂಬಿಯನ್ನು ರಫ್ತು ಮಾಡದೆ ಮೋಸ ಮಾಡಿದ್ದಾನೆ. ಈ ಬಗ್ಗೆ ಶ್ರೀನಿವಾಸ್‌ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





























error: Content is protected !!
Scroll to Top