ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸಾನಿಧ್ಯಗೆ ಅಭಿನಂದನೆ

ಕಾರ್ಕಳ : 2024-25ನೇ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಉದ್ಯಮಿ ನಾರಾವಿಯ ವಸಂತ ರಾವ್ ಹಾಗೂ ಸೌಜನ್ಯ ದಂಪತಿಯ ಪುತ್ರಿ ಸಾನಿಧ್ಯ ಅವರನ್ನು ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಮನೋಹರ್‌ ಅವರ ಮನೆಯಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಯಾಜಿ ನಿರಂಜನ ಭಟ್ ಪಾವಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಕೇಶವ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಸತೀಶ್ ಕರವಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಾವಿತ್ರಿ ಮನೋಹರ್ ವಂದಿಸಿದರು. ಕಮಾಂಡರ್ ಅಶ್ವಿನ್ ಎಂ. ರಾವ್ ಮತ್ತು ಯಶಸ್ವಿನಿ ರಾವ್ ಸಹಕರಿಸಿದರು.

























error: Content is protected !!
Scroll to Top