ಕಾರ್ಕಳ : ಬಾವಿ ಸ್ವಚ್ಛಗೊಳಿಸಲು ಬಾವಿಗೆ ಇಳಿದು ಮೇಲಕ್ಕೆ ಬರಲಾಗದೆ ಒದ್ದಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಮೇ 16ರಂದು ಸಾಣೂರು ಕ್ಯಾಶ್ಯೂ ಫ್ಯಾಕ್ಟರಿ ಬಳಿಯ ಮನೆಯೊಂದರ 35 ಅಡಿ ಆಳ, 20 ಅಡಿ ಅಗಲದ ಬಾವಿಯನ್ನು ಸ್ವಚ್ಛಗೊಳಿಸಲು ಹರೀಶ್ ಆಚಾರ್ಯ (55 ವ) ಎಂಬವರು ಇಳಿದಿದ್ದರು. ಬಾವಿ ಸ್ವಚ್ಛತೆ ಮಾಡಿದ ಬಳಿಕ ಹರೀಶ್ ಅವರಿಗೆ ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ. ತಕ್ಷಣವೇ ಮನೆಯವರು ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರೀಶ್ ಆಚಾರ್ಯವನ್ನು ಬಾವಿಯಿಂದ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಸಿಬ್ಬಂದಿ ಅಚ್ಚುತ ಕರ್ಕೇರ, ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ, ಮುಝಮಿಲ್, ಗಣೇಶ ಆಚಾರ್ಯ ಹಾಗೂ ಭೀಮಪ್ಪ ಪಾಲ್ಗೊಂಡಿದ್ದರು.
ಬಾವಿ ಸ್ವಚ್ಛತೆಗಿಳಿದ ವ್ಯಕ್ತಿ ಮೇಲೆ ಬರಲಾಗದೆ ಒದ್ದಾಟ – ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣೆ









































