ಕಾರ್ಕಳ : ಮಹಾವೀರ ಜಯಂತಿ ಅಂಗವಾಗಿ ಜೈನ್ ಮಿಲನ್ ಕಾರ್ಕಳ ವತಿಯಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಜೈನ್ ಹೊಟೇಲ್ ಮಾಲಕ ಗುಣಪಾಲ್ ಜೈನ್, ಪ್ರಮಾತ್ ಕುಮಾರ್ ಬಂಗ, ಅಜಿತ್ ಕುಮಾರ್ ಇಂದ್ರ ಅವರು ನೀಡಿದ ಹಣ್ಣುಹಂಪಲನ್ನು ಜೈನ್ ಮಿಲನ್ ಅಧ್ಯಕ್ಷರು ಹಾಗೂ ಸದಸ್ಯರು ಒಳರೋಗಿಗಳಿಗೆ ವಿತರಿಸಿದರು.
ದ.ಕ. ಜೈನ ಯುವಜನ ಸಂಘದ ವತಿಯಿಂದ ಬೈಲೂರಿನ ಹೊಸ ಬೆಳಕು ಆಶ್ರಮಕ್ಕೆ ಆಹಾರ ಸಾಮಗ್ರಿ ವಿತರಿಸಿದರು. ಯುವಜನ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹಾವೀರ ಜಯಂತಿ ಅಂಗವಾಗಿ ಹಣ್ಣು ಹಂಪಲು ವಿತರಣೆ



























