ಹೆಬ್ರಿ: ಹೆಬ್ರಿ ಮುನಿಯಾಲಿನ ಆಪ್ತಿ ಆಚಾರ್ಯ ಕಳೆದ ಮಾ.1ರಂದು ಜುಮ್ನಾಸ್ಟಿಕ್‌ನ ಹೈಡ್ರೋಲ್‌ನಲ್ಲಿ ಗರಿಷ್ಠ 4 ನಿಮಿಷ 40 ಸೆಕೆಂಡ್‌ನಲ್ಲಿ ಸತತ 65 ರೌಂಡ್‌ಗಳನ್ನು ಮಾಡುವ ಇಂಡಿಯಾ ಮೂಲಕ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾರೆ. ಮುನಿಯಾಲಿನ ಶಿವಾನಂದ ಆಚಾರ್ಯ-ಲತಾ ದಂಪತಿಯ ಪುತ್ರಿಯಾಗಿರುವ ಆಪ್ತಿ ಹೆಬ್ರಿಯ ಎಸ್ಆರ್ ಪಬ್ಲಿಕ್ ಸ್ಕೂಲ್‌ನ ನಾಲ್ಕನೇ ತರಗತಿಯ ವಿದ್ಯಾರ್ಥಿನಿ. ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ಅವರಿಂದ ನೃತ್ಯ ಹಾಗೂ ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದಾರೆ. ಭಟ್ಕಳ, ಮಡಂತ್ಯಾರು, ಕಾರ್ಕಳ, ಹೆಬ್ರಿ, ಕುಚ್ಚೂರು, ಮುನಿಯಾಲು ಮುಂತಾದ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಪೆರ್ಡೂರು ಹಾಗೂ ಹೆಬ್ರಿಯಲ್ಲಿ ಶಾಲಾ ಮಟ್ಟದಲ್ಲಿ ನಡೆದ ಛದ್ಮವೇಷ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡು ಹಲವು ಬಹುಮಾನಗಳನ್ನು ಪಡೆದಿದ್ದಾರೆ. ಸತತ ಎರಡು ವರ್ಷಗಳಿಂದ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆಯುತ್ತಿದ್ದಾರೆ.
ಹೆಬ್ರಿ: ಜಿಮ್ನಾಸ್ಟಿಕ್‌ನಲ್ಲಿ ಆಪ್ತಿ ಆಚಾರ್ಯ ಇಂಡಿಯಾ ಮೂಲಕ ಬುಕ್ ಆಫ್ ರೆಕಾರ್ಡ್ಸ್ ಸಾಧನೆ





















