ಅರವಿಂದ‌ ಕಲಗುಜ್ಜಿ ಅವರಿಗೆ ಮುಖ್ಯಮಂತ್ರಿ ಪದಕ

ಕಾರ್ಕಳ : ರಾಜ್ಯದ 197 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕಗಳನ್ನು ಪ್ರಕಟಿಸಲಾಗಿದೆ.
ಮಾ. 29ರಂದು ಈ ಕುರಿತು ಒಳಾಡಳಿತ ಇಲಾಖೆ ಮುಖ್ಯ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರವಿಂದ ಎನ್. ಕಲಗುಜ್ಜಿ ಸಿಎಂ‌ ಪದಕಕ್ಕೆ ಭಾಜನರಾಗಿದ್ದಾರೆ.

ಮೂಲತ: ಕಾರವಾರದವರಾದ ಅರವಿಂದ್‌ ಎನ್.‌ ಕಲಗುಜ್ಜಿ ಅವರು 2023ರ ಫೆ. 1ರಂದು ಕಾರ್ಕಳದ ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿದ್ದರು. 2 ವರ್ಷಗಳ ಕಾಲ‌ ಕಾರ್ಕಳದಲ್ಲಿ ಕರ್ತವ್ಯ ಸಲ್ಲಿಸಿದ ಅವರು 2025ರ ಫೆಬ್ರವರಿಯಲ್ಲಿ ವರ್ಗಾವಣೆಗೊಂಡಿದ್ದು, ಪ್ರಸ್ತುತ ತೀರ್ಥಹಳ್ಳಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



















































error: Content is protected !!
Scroll to Top