ಗ್ರಾಮದಿಂದ ಕೇಂದ್ರದ ತನಕವೂ ಬಿಜೆಪಿಯೇ ಅಧಿಕಾರದಲ್ಲಿರಲು ಶ್ರಮಿಸಬೇಕು : ಮಣಿರಾಜ ಶೆಟ್ಟಿ

ಹೆಬ್ರಿ ಬಿಜೆಪಿ ಗ್ರಾಮ ಸಮಿತಿ ಪದಗ್ರಹಣ ಸಮಾರಂಭ

ಹೆಬ್ರಿ : ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷವು – ನಿರಂತರವಾಗಿ ಅಧಿಕಾರಕ್ಕೆ ಬರುತ್ತಿದೆ. ಗ್ರಾಮದಿಂದ ಕೇಂದ್ರದ ತನಕವೂ ಬಿಜೆಪಿಯೇ ಅಧಿಕಾರದಲ್ಲಿರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ ಹೇಳಿದರು. ಅವರು ಮಾ. 20ರಂದು ಹೆಬ್ರಿ ವಿಶ್ವಕರ್ಮ ಸಮುದಾಯ ಭವನದ ಬಳಿ ಜರುಗಿದ ಬಿಜೆಪಿ ಕಾರ್ಕಳ ಮಂಡಲದ ಹೆಬ್ರಿ ಗ್ರಾಮ ಸಮಿತಿ ನೂತನ ತಂಡದ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಪುರ ಸುರೇಶ ಶೆಟ್ಟಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುನ್ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಹೆಬ್ರಿ ಗ್ರಾಮ ಸಮಿತಿಯ ವಾರ್ಡ್ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಬಿಜೆಪಿ ಕಾರ್ಕಳ ಮಂಡಲದ ಅಧ್ಯಕ್ಷ ನವೀನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಸಮಿತಿ ಅಧ್ಯಕ್ಷರಾಗಿ ಅರುಣ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಸುರೇಶ್‌ ಅಧಿಕಾರ ಸ್ವೀಕರಿಸಿದರು. ಹೆಬ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಗ್ರಾಮ ಪಂಚಾಯಿತ್ ಅಧ್ಯಕ್ಷ ತಾರನಾಥ ಬಂಗೇರ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ, ಕಾರ್ಕಳ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ರಾಕೇಶ್ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಲಾಲ್ ವರಂಗ, ಪಕ್ಷದ ವಿವಿಧ ಘಟಕದ ಮುಖಂಡರಾದ ಗಣಪತಿ ಮುದ್ರಾಡಿ, ಶಿವಪ್ರಸಾದ್ ಕೋಟ್ಯಾನ್ ಹೆಬ್ರಿ, ಸುಧಾಕರ ಹೆಗ್ಡೆ, ನರೇಂದ್ರ ನಾಯಕ್, ಜ್ಯೋತಿ ಹರೀಶ ಪೂಜಾರಿ, ಸತೀಶ ಪೂಜಾರಿ ಬೋಳ, ವೀಣಾ ಪ್ರಭು, ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯ ಶೆಟ್ಟಿ ಅಜೆಕಾರು ಪ್ರಾರ್ಥಿಸಿ, ಮುನಿಯಾಲು ಸಮೃದ್ಧಿ ಪ್ರಕಾಶ ಶೆಟ್ಟಿ ಸ್ವಾಗತಿಸಿದರು. ಅರುಣ್‌ ಶೆಟ್ಟಿ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಉದಯ ಅಜೆಕಾರು ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.





























































































error: Content is protected !!
Scroll to Top