ಸರಕಾರಿ ಜಮೀನಿನ ಅತಿಕ್ರಮಣ – ತೆರವುಗೊಳಿಸಿದ ಕಾರ್ಕಳ ತಹಶೀಲ್ದಾರ್‌

ಕಾರ್ಕಳ : ಕೆರ್ವಾಶೆ ಗ್ರಾಮದ ಹೊಸಮನೆ ಪ್ರವೀಣ್ ಜೈನ್ ಅವರ ಪಟ್ಟ ಸ್ಥಳಕ್ಕೆ ತಾಗಿಕೊಂಡಿರುವ ಸರಕಾರಿ ಜಮೀನನ್ನು ಚೆನ್ನಪ್ಪ ಮೂಲ್ಯ ಎಂಬವರು ಅತಿಕ್ರಮಣ ಮಾಡಿದ್ದು ಮಾ. 22ರಂದು ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್‌ ಭೇಟಿ ನೀಡಿದ್ದಾರೆ. ಸರ್ವೇ ನಂಬರ್ 13/1 ರಲ್ಲಿ ಕೆ. ಚೆನ್ನಪ್ಪ ಮೂಲ್ಯ ಅವರು ಅತಿಕ್ರಮಣ ಮಾಡಿರುತ್ತಾರೆ. ಈ ಜಮೀನಿನಲ್ಲಿ ಪ್ರವೀಣ್ ಜೈನ್ ಅವರ ಪಟ್ಟ ಸ್ಥಳಕ್ಕೆ ಹೋಗಲು 6 ಮೀಟರ್ ಅಗಲದ ದಾರಿಯನ್ನು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಸಮ್ಮುಖದಲ್ಲಿ ಬಿಡಿಸಿಕೊಡಲಾಯಿತು. ಸ್ಥಳದಲ್ಲಿ ಅಜೆಕಾರು ಕಂದಾಯ ನಿರೀಕ್ಷಕ ರಿಯಾಜ್, ಗ್ರಾಮ ಆಡಳಿತ ಅಧಿಕಾರಿ ರವಿಚಂದ್ರ ಪಾಟೀಲ್, ತಾಲೂಕು ಸರ್ವೆಯರ್ ಕಿಶೋರ್ ಪಾಟೀಲ್, ಗ್ರಾಮ ಸಹಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



































































































error: Content is protected !!
Scroll to Top