ಮೇ 10 : ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ರಜತ ಸಂಭ್ರಮ

ಕಾರ್ಕಳ : 25 ವರ್ಷದ ಹಿಂದೆ ಕಾರ್ಕಳದ ಸೂರಾಲಿನಲ್ಲಿ ಪ್ರಾರಂಭಗೊಂಡ ನವೋದಯ ಸಂಘ ಇದೀಗ 7 ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿದೆ. 90 ಶೇ. ಮಹಿಳೆಯರೇ ಇರುವ ನವೋದಯ ಸಂಘವು ಮಹಿಳಾ ಸಬಲೀಕರಣದೊಂದಿಗೆ ಹೆಮ್ಮರವಾಗಿ ಬೆಳೆದಿದೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌ ಹೇಳಿದರು.
ಅವರು ಮಾ. 22ರಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ನವೋದಯ ಗ್ರಾಮ ವಿಕಾಸ ಟ್ರಸ್ಟ್‌ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಮುಖ್ಯವಾಹಿನಿಗೆ ಬರುವಲ್ಲಿ ನವೋದಯ ಸಂಘದ ಪಾತ್ರವೂ ಇದೆ. ಮಹಿಳಾ‌ ಸ್ವಾವಲಂಬಿ ಜೀವನಕ್ಕೆ ನವೋದಯ ಸಹಕಾರಿ ಎಂದು ಎಂ. ಎನ್.‌ ರಾಜೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು.

ಮಾ. 24ರ ಸೋಮವಾರ ಮಂಗಳೂರಿನಲ್ಲಿ ನವೋದಯ ಸಂಘದ 5 ಲಕ್ಷ ಮಂದಿ ಸದಸ್ಯರಿಗೆ ಸಮವಸ್ತ್ರ ವಿತರಣೆಯಾಗಲಿದೆ. ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮವಸ್ತ್ರ ವಿತರಣೆ ನಡೆದುಕೊಂಡು ಬಂದಿದೆ ಎಂದರು.

ಮೇ 10ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ರಜತ ಸಂಭ್ರಮ ನಡೆಯಲಿದೆ. ರಜತ ಸಂಭ್ರಮದಲ್ಲಿ 1.5 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ಬೃಹತ್‌ ಈ ಸಮಾವೇಶವು ಮಹಿಳಾ ಶಕ್ತಿಯೊಂದಿಗೆ ಮಂಗಳೂರಿನಲ್ಲಿ ಹೊಸದೊಂದು ಚರಿತ್ರೆ ನಿರ್ಮಿಸಲಿದೆ.
ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತವಿಕ ಮಾತುಗಳನ್ನಾಡಿ, ಸಹಕಾರಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಷ್ಟ್ರದಲ್ಲಿ ಮಾದರಿಯೆನಿಸಿರುವವರು ರಾಜೇಂದ್ರ ಕುಮಾರ್. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರಾರಂಭವಾಗಿ 25 ವರ್ಷ ಪೂರೈಸಿದೆ. ಅಧ್ಯಕ್ಷರ ಜನ್ಮಭೂಮಿಯಾದ ಕಾರ್ಕಳದಲ್ಲಿ ಟ್ರಸ್ಟ್ ಪ್ರಾರಂಭಗೊಂಡಿದ್ದು ಇದೀಗ 4 ಲಕ್ಷ ಕುಟುಂಬದ ಬದುಕಿಗೆ ಬೆಳಕಾಗಿದೆ ಎಂದರು.

ನವೋದಯ ಮೆರವಣಿಗೆ
ಸಮಾರಂಭದ ಮುನ್ನ ಎಸ್‌ಸಿಡಿಸಿಸಿ ಬ್ಯಾಂಕ್‌ ಆವರಣದಿಂದ ಕಾರ್ಯಕ್ರಮ ನಡೆಯುವ ಕೇಂದ್ರ ನೆಹರೂ ಮೈದಾನಕ್ಕೆ ಮೆರವಣಿಗೆ ಸಾಗಲಿದೆ.

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಮೇಘರಾಜ್‌ ಜೈನ್‌, ಸುನಿಲ್ ಕುಮಾರ್ ಬಜಗೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ನಿರೂಪಿಸಿ, ವಂದಿಸಿದರು.



































































































error: Content is protected !!
Scroll to Top