ಜೇಸಿಐ ಇಂಡಿಯಾ ವಲಯ 15 – ಲಾಟ್ಸ್‌ ಘಟಕಾಧಿಕಾರಿಗಳ ತರಬೇತಿ

ಕಾರ್ಕಳ : ಜೇಸಿಐ ಇಂಡಿಯಾ ವಲಯ 15ರ ಲಾಟ್ಸ್‌ (LOTS) ಘಟಕಾಧಿಕಾರಿಗಳ ತರಬೇತಿ ಕಾರ್ಯಕ್ರಮ ಜೇಸಿಐ ಕಾರ್ಕಳ ರೂರಲ್‌ನ ಆತಿಥ್ಯದಲ್ಲಿ ಬಾಲಾಜಿ ಇನ್ ಹೋಟೆಲ್‌ನಲ್ಲಿ ಜ. 1 ಹಾಗೂ 2ರಂದು ಎರಡು ದಿನಗಳ ಕಾಲ ಜರುಗಿತು.

ಜೇಸಿಐ ಇಂಡಿಯಾ ವಲಯ 15ರ ವಲಯಾಧ್ಯಕ್ಷ ಅಭಿಲಾಷ್‌ ಬಿ.ಎ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜೇಸಿಐ ಕಾರ್ಕಳ ರೂರಲ್‌ ಆತಿಥ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಲಾಟ್ಸ್‌ ತರಬೇತಿ ಆಯೋಜಿಸಲಾಗಿದೆ. ಜೇಸಿಐನ ಬಂಧುಗಳು ಈ ಒಂದು ತರಬೇತಿ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಜೇಸಿಐ ಇಂಡಿಯಾ ವಲಯ 15ರ ಜಡ್‌.ಡಿ. ಮ್ಯಾನೇಜ್‌ಮೆಂಟ್‌ನ ಅಜಿತ್‌ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ವಿಜಯ್‌ ಶೆಟ್ಟಿ ಪಾಲ್ಗೊಂಡಿದ್ದರು. ಮುಖ್ಯ ತರಬೇತುದಾರರಾಗಿ ಜೇಸಿಐ ಇಂಡಿಯಾ ಪೂರ್ವಧ್ಯಕ್ಷ ಟಿ.ವಿ.ಎನ್‌. ಮೂರ್ತಿ ಹಾಗೂ ತರಬೇತುದಾರರಾಗಿ ಜೇಸಿಐ ಇಂಡಿಯಾ ನಿಕಟಪೂರ್ವ ಅಧ್ಯಕ್ಷ ಸದಾನಂದ ನಾವಡ ಮತ್ತು ಜೇಸಿಐ ಇಂಡಿಯಾ ವಲಯ 15ರ ನಿಕಟಪೂರ್ವ ವಲಯಾಧ್ಯಕ್ಷ ಕೃಷ್ಣಮೋಹನ್‌ ಪಿ.ಎಸ್.‌ ಭಾಗವಹಿಸಿದ್ದರು.

ಜೇಸಿಐ ಇಂಡಿಯಾ ಉಪಾಧ್ಯಕ್ಷ ಜಿ.ಎಸ್.‌ಎನ್.‌ ವರ್ಮ, ನಿಕಟಪೂರ್ವ ಉಪಾಧ್ಯಕ್ಷ ಮುರಳಿಶ್ಯಾಮ್‌, ಜೇಸಿಐ ಇಂಡಿಯಾ ವಲಯ 15ರ ನಿಕಟಪೂರ್ವ ವಲಯಾಧ್ಯಕ್ಷ ಗಿರೀಶ್‌ ಎಸ್.ಪಿ., ಜೇಸಿಐ ಇಂಡಿಯಾ ವಲಯ 15 ಜೇಎಸಿ ಚೇರ್‌ಪರ್ಸನ್‌ ಆಶಾ ಅಲನ್‌ ವಾಜ್‌ ಮೊದಲಾದವರು ಉಪಸ್ಥಿತರಿದ್ದರು. ಒಟ್ಟು 135 ಘಟಕಾಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಜೇಸಿಐ ಕಾರ್ಕಳ ರೂರಲ್ ಅಧ್ಯಕ್ಷ ಅರುಣ್ ಮಾಂಜ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಸಂತೋಷ್ ಪೂಜಾರಿ ಮಾಳ ವಂದಿಸಿದರು.

ಉದಕ ಪುಸ್ತಕ ಅನಾವರಣ
































































error: Content is protected !!
Scroll to Top