ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೋಳ ಪಿಲಿಯೂರು – ವಾರ್ಷಿಕೋತ್ಸವ

ಕಾರ್ಕಳ : ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೋಳ ಪಿಲಿಯೂರು ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮಿತ್ರವೃಂದ (ರಿ.) ಬರಬೈಲು ಇವುಗಳ ಜಂಟಿ ಆಶ್ರಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಶಾಲಾ ರಂಗ ವೇದಿಕೆಯಲ್ಲಿ ನಡೆಯಿತು. ಬೆಳಗ್ಗೆ ಬೋಳ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಸಂಜೆ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ಸಂಚಾಲಕಿ, ದಂತವೈದ್ಯೆ ಡಾ. ಅಕ್ಷತಾ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಶ್ಯಾಮ್ ಸುಂದರ್ ಎಂ. ಮಾತನಾಡಿ, ಕನ್ನಡ ಮಾಧ್ಯಮ ಶಾಲೆಯ ಬೆಳವಣಿಗೆ ಹಾಗೂ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು.

ಅಭಿನಂದನೆ
ನಿವೃತ್ತ ಶಿಕ್ಷಕ ಕೆ. ವಿಷ್ಣುಮೂರ್ತಿ ರಾವ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಶಾಲಾ ಹಿರಿಯ ವಿದ್ಯಾರ್ಥಿ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ್ ಕುಮಾರ್ ಕೆಮ್ಮಣ್ಣು ಅವರನ್ನು ಸನ್ಮಾನಿಸಲಾಯಿತು. ಕಲಿಕೆ ಹಾಗೂ ಆಟೋಟ ಸ್ವರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗೌರವ ಶಿಕ್ಷಕಿಯರಾದ ಶಶಿಕಲಾ ಜ್ಯೋತಿ ದುರ್ಗೇಶ್ ಪೂಜಾರಿ ಪುರಸ್ಕೃತರ ಪಟ್ಟಿ ವಾಚಿಸಿದರು. ದೈಹಿಕ ಶಿಕ್ಷಕಿ ಶಶಿಕಲಾ ಸಪಳಿಗ ಹಳೆ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು.

ಸಮಾರಂಭದಲ್ಲಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ದಿನೇಶ್ ಪೂಜಾರಿ, ಬೋಳ ವಿಠಲ ಶೆಟ್ಟಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಸುನಿಲ್ ಶೆಟ್ಟಿ, ಗ್ರಾಮ ಕರಣಿಕ ಸುದರ್ಶನ್ ಕಾಮತ್, ಬೆಂಗಳೂರಿನ ವೈಟ್ ಎಂಡ್ ವೈಟ್ ಇದರ ಕಾಪು ವಿಭಾಗದ ಮ್ಯಾನೇಜರ್ ಸುಧೀರ್ ದೇವಾಡಿಗ, ಸುಕುಮಾರ್ ಶೆಟ್ಟಿ ಬೋಳ ಪರಾರಿ, ಶಾಲಾ ಹಿರಿಯ ವಿದ್ಯಾರ್ಥಿ ಬಿ. ಪ್ರಕಾಶ್, ನಿವೃತ್ತ ಮುಖ್ಯ ಶಿಕ್ಷಕ ಹೂವಪ್ಪ ಮಾಸ್ಟರ್, ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್‌ನ ಬೋಳ ದಾಮೋದರ ಕಾಮತ್, ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ತಟ್ಟದ ಬೈಲು ಬೋಳ, ಪ್ರದೀಪ್ ಶೆಟ್ಟಿ ಕೆದಿಂಜೆ ಕೂಟಾಯಿ, ಪ್ರಿಯದರ್ಶಿನಿ ಗ್ಯಾಸ್ ಏಜೆನ್ಸಿ ಮಾಲಕ ಬಿ. ಕೃಷ್ಣಮೂರ್ತಿ, ಸುಜಾತಾ ಶೇಖರ್ ಶೆಟ್ಟಿ ಬೋಳ, ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ‍್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ. ಜಯರಾಮ ಶೆಟ್ಟಿ, ಕೋಶಾಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಮಿತ್ರವೃಂದ (ರಿ) ಬರಬೈಲು ಇದರ ಅಧ್ಯಕ್ಷ ಸುಪ್ರೀತ್ ಶೆಟ್ಟಿ ಹಾಗೂ ಕಾರ್ಯದರ್ಶಿ ಬಿ. ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪಾರ್ಥಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಪುಂಡಲೀಕ ಎಸ್. ಪವಾರ್ ಸ್ವಾಗತಿಸಿದರು. ಹಿರಿಯ ಗೌರವ ಶಿಕ್ಷಕಿ ಗೀತಾ ದೇವಾಡಿಗ ವರದಿ ಮಂಡಿಸಿದರು. ಹಿರಿಯ ವಿದ್ಯಾರ್ಥಿ ಸತೀಶ್ ಶೆಟ್ಟಿ ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜ್ಯೋತಿ ವಂದಿಸಿದರು. ಗೌರವ ಶಿಕ್ಷಕಿಯರಾದ ದೀಪಾ, ಸ್ವಾತಿ ಹಾಗೂ ಪೂರ್ವ ವಿದ್ಯಾರ್ಥಿಗಳಾದ ತಾರಾನಾಥ್ ಬೋಳ, ಚಂದ್ರಹಾಸ್ ಪುತ್ರನ್, ಪ್ರಮೀಳ ಸತೀಶ್ ಶೆಟ್ಟಿ, ಪ್ರತೀಕ್ಷಾ ವಜ್ರೇಶ್ ಮಾಡ, ಸಂಗೀತಾ ಶರತ್ ಶೆಟ್ಟಿ, ರಘುನಾಥ್ ಪುತ್ರನ್ ಹಾಗೂ ಶ್ರೀಷಾ ಪವನ್ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಸೂರಜ್ ಕುಲಾಲ್ ಮತ್ತು ಕೇಶವ ಆಚಾರ್ಯ ನಿರ್ದೇಶನದ ಗರ್ವಭಂಗ ಯಕ್ಷಗಾನ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಬರವುದ ಬೊಳ್ಳಿ ರಾಜೇಶ್ ಆಚಾರ್ಯ ಪರ್ಕಳ ವಿರಚಿತ ʼಆಲ್ ಎನ್ನಾಲ್ʼ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

































































error: Content is protected !!
Scroll to Top