ಬಾಂಧವ್ಯದ ಪರಿಮಳ ಪಸರಿಸುತ್ತಿರುವ ಲಯನ್ಸ್‌ : ಸುಜಾತ ಹರೀಶ್

ಹೆಬ್ರಿಯಲ್ಲಿ ʼಪರಿಮಳʼ ಲಯನ್ಸ್‌ ಪ್ರಾಂತೀಯ ಸಮ್ಮೇಳನ

ಹೆಬ್ರಿ : ಸರ್ವೇ ಜನಾ ಸುಖಿನೋ ಭವಂತು ಎನ್ನುವ ಮಾತಿನಂತೆ ಅಂತಾರಾಷ್ಟ್ರೀಯ ಸಂಸ್ಥೆ ಲಯನ್ಸ್‌ ಬಾಂಧವ್ಯದ ಬೆಸುಗೆಯನ್ನು ಪಸರಿಸುತ್ತಿದೆ. ಉತ್ತಮ ಸೇವಾ ಚಟುವಟಿಕೆಯ ಮೂಲಕ ಹೆಸರು ಮಾಡಿರುವ ಹೆಬ್ರಿ ಲಯನ್ಸ್‌ ಸಂಸ್ಥೆ ಕಳೆದ 28 ವರ್ಷಗಳಿಂದ ಏಕತಾ ಮನೋಭಾವವನ್ನು ಮೂಡಿಸುತ್ತಾ ಉಡುಪಿ ಜಿಲ್ಲೆ 317ಸಿಯಲ್ಲಿ ಮುಂಚೂಣಿಲ್ಲಿದೆ ಎಂದು ಪ್ರಾಂತ್ಯದ ಪ್ರಥಮ ಮಹಿಳೆ ಸುಜಾತ ಹರೀಶ್‌ ತಿಳಿಸಿದರು. ಫೆ. 2ರಂದು ಹೆಬ್ರಿ ಪರಿಮಳ ಗಾರ್ಡನ್‌ನಲ್ಲಿ ಬೆಳಂಜೆ ದಿ.ಜಗನ್ನಾಥ ಪೂಜಾರಿ ವೇದಿಕೆಯಲ್ಲಿ ಜರುಗಿದ ಲಯನ್ಸ್‌ ಪ್ರಾಂತೀಯ ಸಮ್ಮೇಳನ ʼಪರಿಮಳʼವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂತ್ಯಾಧ್ಯಕ್ಷ ಹರೀಶ್‌ ಬೆಳಂಜೆ ಮಾತನಾಡಿ, ಪ್ರಾಂತ್ಯ ಸಮ್ಮೇಳನವು ಹೆಬ್ರಿಯಲ್ಲಿ ದ್ವಿತೀಯ ಬಾರಿ ಆಯೋಜನೆ ಆಗಿದ್ದು, ಕ್ಲಬ್ಬಿನ ಸದಸ್ಯರ ಸಹಕಾರವಿದ್ದರೆ ಪ್ರಾಂತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಬಹುದು ಎಂದು ನಮ್ಮ ಕ್ಲಬ್‌ ಸದಸ್ಯರು ತೋರಿಸಿ ಕೊಟ್ಟಿದ್ದಾರೆ. ಜೀವನದಲ್ಲಿ ಯಾವೊಂದು ಕೆಲಸ ಕಾರ್ಯವನ್ನು ಕಡೆಗಣಿಸದೆ ಮುನ್ನುಗ್ಗಿದರೆ ಒಂದಲ್ಲ ಒಂದು ದಿನ ಒಳ್ಳೆಯ ಪ್ರತಿಫಲ ಸಿಗುತ್ತದೆ. ಈ ಸಮ್ಮೇಳನವು ಜಿಲ್ಲೆಯ ಹನ್ನೆರಡು ಕ್ಲಬ್‌ಗಳ ಸಹಕಾರದಿಂದ ಯಶಸ್ವಿಯಾಗಿ ಮೂಡಿಬಂದಿದೆ ಎಂದರು.

ಸ್ನೇಹ ಮತ್ತು ಸಹಕಾರವಿದ್ದರೆ ಉತ್ತಮವಾದ ಸೇವಾ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಮುಖ್ಯ ಅತಿಥಿ ಆಳ್ವಾಸ್ ಕಾಲೇಜಿನ ಕನ್ನಡ‌ ಉಪನ್ಯಾಸಕ ಡಾ. ಯೋಗೀಶ್‌ ಕೈರೋಡಿ ಅಭಿಪ್ರಾಯ ಪಟ್ಟರು. ಅಂತರಂಗದ ಕಂಗಳಿಂದ ಸಂತಸವನ್ನು ಹುಡುಕಿದರೆ ಮಾತ್ರ ಬದುಕಿನ ಸಂತೋಷವನ್ನು ಅನುಭವಿಸಲು ಸಾಧ್ಯ. ಪ್ರಾಂತ್ಯ ಸಮ್ಮೇಳನ ಒಂದು ಹಬ್ಬ, ಇದೊಂದು ಸ್ವರ್ಗದ ಹಾಗೆ, ಸ್ನೇಹಮಯಿ ಬಾಂಧವ್ಯವಿದ್ದಲ್ಲಿ ನಾವೆಲ್ಲ ಒಂದಾಗಲು ಸಾಧ್ಯವಿದೆ ಎಂದವರು ತಿಳಿಸಿದರು.

ಸಮ್ಮೇಳನದಲ್ಲಿ ಹರೀಶ್‌ ದಂಪತಿಗಳನ್ನು ಮತ್ತು ಮಾಜಿ ಜಿಲ್ಲಾ ಗವರ್ನರ್‌ಗಳನ್ನು ಗೌರವಿಸಲಾಯಿತು. ನಿವೃತ್ತ ಡಿಎಫ್‌ಓ ಹೆಚ್‌. ಆರ್‌. ಸುಬ್ರಹ್ಮಣ್ಯ, ಉದ್ಯಮಿ ಪ್ರಸಾದ್‌ ಪಿ. ಶೆಟ್ಟಿ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಟಿ. ಜಿ ಆಚಾರ್ಯ, ಗೌರವ ಸಲಹೆಗಾರರಾದ ಭಾರ್ಗವಿ ಐತಾಳ್‌, ದಿನಕರ್‌ ಪ್ರಭು, ಸಮ್ಮೇಳನ ಕೋಶಾಧಿಕಾರಿ ರವಿಂದ್ರನಾಥ್‌ ಶೆಟ್ಟಿ, ಮಾಜಿ ಗವರ್ನರ್‌ ಎನ್‌. ಎಂ. ಹೆಗ್ಡೆ, ಉಪ ಜಿಲ್ಲಾ ಗವರ್ನರ್‌ ಸಪ್ನಾ ಸುರೇಶ್‌ ಮತ್ತು ರಾಜೀವ್‌ ಕೋಟ್ಯಾನ್‌, ಎಲ್‌ಸಿಎಫ್‌ ಕೋರ್ಡಿನೇಟರ್‌ ಹರಿಪ್ರಸಾದ್‌ ರೈ, ಪ್ರಾಂತ್ಯ ಕಾರ್ಯದರ್ಶಿ ಥಾಮಸ್‌ ಲುಕೋಸ್‌, ವಲಯಾಧ್ಯಕ್ಷರಾದ ಶಾಕೀರ್‌ ಹುಸೇನ್‌, ರಘುರಾಮ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಹೆಬ್ರಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ನಾಗೇಶ್‌ ನಾಯಕ್‌, ಕಾರ್ಯದರ್ಶಿ ಹರೀಶ್‌ ಶೆಟ್ಟಿ, ಕೋಶಾಧಿಕಾರಿ ಆಶಾ ಬಿ. ಶೆಟ್ಟಿ, ಇತರ ಪ್ರಾಂತ್ಯದ ಅಧ್ಯಕ್ಷರು, ವಲಯ ಕಾರ್ಯದರ್ಶಿಗಳು, ಜಿಲ್ಲಾ ಅಂಬಾಸಿಡರ್‌ ಅರುಣ್‌ ಕುಮಾರ್‌ ಹೆಗ್ಡೆ , ಸಂಪುಟ ಕಾರ್ಯದರ್ಶಿ ಗಿರೀಶ್‌ ರಾವ್‌, ಲಿಯೋಕ್ಲಬ್‌ ಅಧ್ಯಕ್ಷ ದರ್ಶನ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಸೈನಿಕ ಪ್ರಸನ್ನ ಶೆಟ್ಟಿ ಸೋಮೇಶ್ವರ ರಾಷ್ಟ್ರಧ್ವಜವನ್ನು ವೇದಿಕೆಗೆ ತಂದರು, ಬಳಿಕ ಸಾಮೂಹಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. ಹೆಚ್.‌ ದಿನಕರ ಪ್ರಭು ಧ್ವಜವಂದನೆ ಮಾಡಿದರು. ರಿಯಾ ಪ್ರಾರ್ಥಿಸಿ, ಸಮ್ಮೇಳನ ಸಮಿತಿ ಅಧ್ಯಕ್ಷ ವಾದಿರಾಜ್‌ ಶೆಟ್ಟಿ ಸ್ವಾಗತಿಸಿದರು. ಸ್ವಾಗತ ನೃತ್ಯವನ್ನು ನಕ್ಷತ್ರಾ ನೆರವೇರಿಸಿ, ಕೃಷ್ಣ ಶೆಟ್ಟಿ ವಂದಿಸಿದರು. ಪ್ರಕಾಶ್‌ ಪೂಜಾರಿ ಮತ್ತು ಸ್ನೇಹಲತಾ ಟಿ. ಜಿ ಕಾರ್ಯಕ್ರಮ ನಿರೂಪಿಸಿದರು. ಕೆ. ರಾಮಚಂದ್ರ ಭಟ್‌ ನೋಂದಾವಣೆಯ ವರದಿಯನ್ನು ನೀಡಿದರು. ಲಯನ್‌ ನೀತಿ ಸಂಹಿತೆಯನ್ನು ಮಹಾಬಲ ಶೆಟ್ಟಿ ವಾಚಿಸಿದರು.























































error: Content is protected !!
Scroll to Top