ಸಾಣೂರು ಮೋಹನ್‌ ದಾಸ್‌ ಬಿ. ಪ್ರಭು ಅವರಿಗೆ ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿ

ಕಾರ್ಕಳ : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ರಿ. ಇದರ ವತಿಯಿಂದ ಕನ್ನಡ ರಾಜ್ಯೋತ್ಸವ-2024 ಹಾಗೂ ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಸಾಧಕರಿಗೆ ಕೊಡಮಾಡುವ ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿಗೆ ಸಾಣೂರಿನ ಡಾ. ಮೋಹನ್‌ ದಾಸ್‌ ಬಿ. ಪ್ರಭು ಭಾಜನರಾಗಿದ್ದಾರೆ.
ಡಿ. 29ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತ್ತಹಳ್ಳಿ ಅಂಬೇಂಡ್ಕರ್‌ ಕಾಲೇಜು ಬಳಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಮೋಹನ್‌ ದಾಸ್‌ ಬಿ. ಪ್ರಭು ಅವರು ರಂಗಭೂಮಿ, ಯಕ್ಷಗಾನ, ಚಲನಚಿತ್ರ, ಸಭಾ ಕಾರ್ಯಕ್ರಮ ನಿರೂಪಣೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪ್ರಬಂಧಕರಾಗಿ 38 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಕಾರ್ಕಳ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ರೋಟರಿ ಕ್ಲಬ್‌ನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.











































































error: Content is protected !!
Scroll to Top