ಸಿ.ಎ. ಅಂತಿಮ ಪರೀಕ್ಷೆ – ಜ್ಞಾನಸುಧಾದ ಮೂವರು ಹಳೆ ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ – ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಯ ಪುತ್ರ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ ಮೋಹನ್‌ ಕಿಣಿ ಮತ್ತು ಶುಭಾ ಕಿಣಿ ದಂಪತಿಯ ಪುತ್ರಿ ಸ್ವಾತಿ ಕಿಣಿ ಮತ್ತು ಬೈಲೂರು ರಮೇಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿ ಪುತ್ರಿ ರಕ್ಷಾ ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಸಾಧಕರಿಗೆ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾದ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.











































































error: Content is protected !!
Scroll to Top