ಕಾರ್ಕಳ : ಕೊರಗ ಸಂಘಗಳ ಒಕ್ಕೂಟ ಒಕ್ಕೂಟ (ರಿ) ಕರ್ನಾಟಕ-ಕೇರಳ ಮತ್ತು ಕೊರಗ ಅಭಿವೃದ್ಧಿ ಸಂಘಟನೆ ಬಜಗೋಳಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕಡಾರಿಯಲ್ಲಿ ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆಯ ಅಂಗವಾಗಿ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನ್ಯಾಯಾವಾದಿ ವಿ. ಸುರೇಶ್ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ, ದೌರ್ಜನ್ಯ ಹಾಗೂ ಪೋಕ್ಸೋ ಕಾಯಿದೆಯ ಕುರಿತು ಹಾಗೂ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಿರೀಶ್ ಅವರು ಆರೋಗ್ಯ ಮತ್ತು ಕಾಯಿಲೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಜಗೋಳಿ ಕೊರಗ ಅಭಿವೃದ್ಧಿ ಸಂಘಟನೆ ಅಧ್ಯಕ್ಷ ರವಿ, ಕಾರ್ಯದರ್ಶಿ ವನಿತಾ, ಕೋಶಾಧಿಕಾರಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ಬಜಗೋಳಿ ಕೊರಗ ಅಭಿವೃದ್ಧಿ ಸಂಘಟನೆಯಿಂದ ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆ





































