ಬೆಳಗಾವಿ : ವಿಧಾನಮಂಡಲ ಅಧಿವೇಶನದಲ್ಲಿ ಸಿಟಿ ರವಿ ಅವಾಚ್ಯ ಪದ ಬಳಕೆ ಕುರಿತಂತೆ ವಿಡಿಯೋ ಆಡಿಯೋ ದಾಖಲೆಯನ್ನು ಇಂದು ಮಾಧ್ಯಮಗಳ ಎದುರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಸಿಟಿ ರವಿ ವಿರುದ್ಧ ಕಾನೂನು ಸಮರ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
18 ಸೆಕೆಂಡ್ ಇರುವ ವಿಡಿಯೋದಲ್ಲಿ ಸಿಟಿ ರವಿ ಅವರು ಎದ್ದುನಿಂತುಕೊಂಡು ಪೋಸ್ಟ್ ಹಿಡಿದು ಎದುರಿಗೆ ಇರುವವರ ವಿರುದ್ಧ ಧಿಕ್ಕಾರ ಕೂಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೊನೆಗೆ ಪ್ರಾ** ಎಂಬ ಪದವನ್ನು ಮೂರು ಬಾರಿ ಹೇಳಿದಂತೆ ಕೇಳಿಸುತ್ತದೆ. ಇನ್ನೊಂದು ವಿಡಿಯೋದಲ್ಲಿ ಹೇ ಡ್ರಗ್ ಅಡಿಕ್ಟ್ ಎಂದು ಹೇಳಿರುವುದು ಕೇಳುತ್ತದೆ.
ಸಿಟಿ ರವಿ ಧ್ವನಿ ಇರುವ ವಿಡಿಯೋ ರಿಲೀಸ್ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್















