ಬದಲಾವಣೆಗಳಿಗೆ ಹೊಂದಿಕೊಂಡರೆ ಜೀವನದಲ್ಲಿ ಯಶಸ್ಸು : ಡಾ.ಕೆ.ರಾಮಚಂದ್ರ ಜೋಶಿ

ಕಾರ್ಕಳ : ಸುಖ ಮತ್ತು ದುಃಖ ಬದಲಾಗುತ್ತಾ ಇರುತ್ತವೆ. ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕಾದರೆ ಜೀವನದಲ್ಲಿ ಬರುವ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಯಶಸ್ಸು ಅಂದರೆ ಹೊಂದಾಣಿಕೆಯೇ ಆಗಿದೆ ಎಂದು ಪ್ರಖ್ಯಾತ ವೈದ್ಯ ಡಾ.ಕೆ.ರಾಮಚಂದ್ರ ಜೋಶಿ ಹೇಳಿದರು. ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಎಸ್.ವಿ.ಎಸ್.ವಿ. ಫಂಡಿನ ಸದಸ್ಯ ಎಸ್.ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿ ಶಾಲಾ ವಾರ್ಷಿಕಾಂಕ ಬಿಡುಗಡೆಗೊಳಿಸಿದರು. ಮುಖ್ಯಶಿಕ್ಷಕ ಆರ್. ನಾರಾಯಣ ಶೆಣೈ ವಿದ್ಯಾರ್ಥಿಗಳ ಸಾಧನೆಯ ವರದಿ ವಾಚಿಸಿದರು. ಶಾಲಾ ಸಂಚಾಲಕ ನರೇಂದ್ರ ಕಾಮತ್ ಕೆ., ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವೈ.ಮೋಹನ ಶೆಣೈ ಮತ್ತು ಜ್ಯೋತಿ ಜೆ. ಪೈ, ಉದ್ಯಮಿ ಬೋಳ ರಘುರಾಮ ಕಾಮತ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ವಿದ್ಯಾ ಕಿಣಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ರಾಜ್ಯಮಟ್ಟದಲ್ಲಿ ಕ್ರೀಡಾ ಸಾಧನೆಗೈದ ಅಕ್ಷರ್ ಪದ್ಮಶಾಲಿ ಅವರನ್ನು ಅಭಿನಂದಿಸಲಾಯಿತು. ಸಂಸ್ಕೃತ ಶಿಕ್ಷಕಿ ಪೂರ್ಣಿಮಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಕುಮಾರ್ ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕ ದಿವ್ಯಕುಮಾರ್ ವಂದಿಸಿದರು. ಶಿಕ್ಷಕ ಶಿಕ್ಷಕಿಯರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಯಕ್ಷಗಾನ ಮತ್ತು ನೃತ್ಯ ವೈವಿಧ್ಯ ಪ್ರದರ್ಶಿಸಿದರು.









































































error: Content is protected !!
Scroll to Top