ಸಾವಿತ್ರಿ ಮನೋಹರ್ ಅವರ ಕೃತಿಗೆ ಪ್ರಭಾವತಿ ಶೆಡ್ತಿ ದತ್ತಿ ನಾಟಕ ಮಾಣಿಕ್ಯ ಪ್ರಶಸ್ತಿ

ಕಾರ್ಕಳ : ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ಕೊಡಮಾಡುವ ಪ್ರಭಾವತಿ ಶೆಡ್ತಿ ದತ್ತಿ ನಾಟಕ ಮಾಣಿಕ್ಯ ಪ್ರಶಸ್ತಿಗೆ ಸಾವಿತ್ರಿ ಮನೋಹರ್ ಅವರ ನಮ್ಮ ಸಂಸಾರ ಆನ್ಲೈನ್ ಅವಾಂತರ ಕೃತಿ ಆಯ್ಕೆಯಾಗಿದೆ.
ಕಳೆದ ಒಂಭತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ವಿವಿದ ಪ್ರಕಾರಗಳ ಕೃತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು, 2024ರ ದತ್ತಿ ಪ್ರಶಸ್ತಿಗೆ 2023ರಲ್ಲಿ ಮುದ್ರಣವಾದ ಸ್ವತಂತ್ರ ರಚನೆಯ ನಾಟಕ, ಕಾದಂಬರಿ, ಗಜಲ್ ಹಾಗೂ ಚುಟುಕು ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಲೇಖಕರು ನಿರೀಕ್ಷೆಗೂ ಮೀರಿದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಅವುಗಳಲ್ಲಿ ಸಾಹಿತಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ಡಾ. ಹಸೀನಾ ಎಚ್.ಕೆ., ನಾಗರಾಜ್ ದೊಡ್ಡಮನಿ, ಎಚ್‌.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ಲತಾಮಣಿ ಎಂ.ಕೆ. ತುರುವೇಕೆರೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ನಾಟಕ ವಿಭಾಗದ ಪ್ರಭಾವತಿ ಶೆಡ್ತಿ ದತ್ತಿ ನಾಟಕ ಮಾಣಿಕ್ಯ ಪ್ರಶಸ್ತಿಗೆ ಕಾರ್ಕಳದ ಸಾವಿತ್ರಿ ಮನೋಹರ್ ಅವರ ನಮ್ಮ ಸಂಸಾರ ಆನೈನ್ ಅವಾಂತರ ಕೃತಿ ಆಯ್ಕೆಯಾಗಿದ್ದು ಪ್ರಶಸ್ತಿ ಜೊತೆಗೆ 2500 ನಗದು ಪುರಸ್ಕಾರ ಇರಲಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರಿಗೆ 2024 ಸೆ. 28 ಶನಿವಾರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್‌ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎಂಟನೇ ಕವಿ-ಕಾವ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

















































error: Content is protected !!
Scroll to Top