ಶಿರೂರು ಗುಡ್ಡ ಕುಸಿತ – 71 ದಿನಗಳ ಬಳಿಕ ಅರ್ಜುನ್‌ನ ಮೃತ ದೇಹ ಪತ್ತೆ

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ 71ದಿನಗಳ ಬಳಿಕ ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ ಅವರ ಮೃತದೇಹ ಸೆ. 25ರಂದು ಪತ್ತೆಯಾಗಿದೆ ವರದಿಯಾಗಿದೆ.

ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್‌ ಅವರ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್‌ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.
ಲಾರಿಯ ಮಾಲೀಕ ಮನಾಫ್‌ ಅವರು ಇದು ತಮ್ಮದೆ ಲಾರಿಯೆಂದು ಗುರುತಿಸಿದ್ದು, ಲಾರಿಯೊಳಗೆ ಮೃತದೇಹ ಪತ್ತೆಯಾಗಿದೆ. ಇದು ಅರ್ಜುನ್‌ ಅವರ ಮೃತದೇಹವೆಂದು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ.‌

















































error: Content is protected !!
Scroll to Top