ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಾಡುವಂತಹ ಪಿಸಿಓಡಿ ಬಗ್ಗೆ ತಿಳಿಯೋಣ.
ಪಿಸಿಓಡಿ ಎಂದರೆ ಪಾಲಿಸಿಸ್ಟಿಕ್ ಒವೇರಿಯನ್ ದಿಸಾರ್ಡರ್. ಇದು ಹಾರ್ಮೋನಿನ ಅಸಮತೋಲನ ಆಗಿದ್ದು ಸಂತಾನೋತ್ಪತ್ತಿ ವಯಸ್ಸಿನ ಅಂದರೆ 20 ರಿಂದ 35 ವಯಸ್ಸಿನ ಮಹಿಳೆಯರಿಗೆ ಕಾಡುವಂತಹ ಸಮಸ್ಯೆಯಾಗಿದೆ.
ಕಾರಣಗಳು
ಹಾರ್ಮೋನ್ ಅಸಮತೋಲನ.
ವಂಶಪಾರಂಪರಗತವಾಗಿ ಬಂದಿರಬಹುದು.
ಬೊಜ್ಜು, ಒತ್ತಡ, ಜೀವನ ಶೈಲಿ.
ಆಯುರ್ವೇದದ ಪ್ರಕಾರ ಇದು ತ್ರಿದೋಷಜ ಅಂದರೆ ವಾತ ಪಿತ್ತ ಹಾಗು ಕಫದಿಂದ ಆಗುವಂತಹ ವ್ಯಾದಿಯಾಗಿದೆ
ಲಕ್ಷಣಗಳು
ಅನಿಯಮಿತ ಮುಟ್ಟಿನ ಚಕ್ರಗಳು, ಮುಟ್ಟಾಗದೇ ಇರುವುದು. ತೂಕ ಹೆಚ್ಚಳ, ಮೊಡವೆ, ಬಂಜೆತನ, ಖಿನ್ನತೆ, ಆತಂಕ, ಕೂದಲು ಉದುರುವುದು, ತಲೆನೋವು, ನಿದ್ರಾಹೀನತೆ, ಆಯಾಸ ಹಾಗೂ ಅಜೀರ್ಣದ ಸಮಸ್ಯೆಗಳು.

ದುಷ್ಪರಿಣಾಮಗಳು
ಬಂಜೆತನ
ಎಬೊಶನ್, ಪ್ರಿಮೆಚೂರ್ ಜನನ.
ಡಯಾಬಿಟಿಸ್, ಹೈ ಬಿಪಿ.
ಖಿನ್ನತೆ
ಶ್ವಾಸಕೋಶ ಸಂಬಂಧ ಕಾಯಿಲೆಗಳು.
ತಡೆಯುವುದು ಹೇಗೆ?
ಆಹಾರ – ದಿನನಿತ್ಯ ಶುದ್ಧ ಬಿಸಿಯಾದ ಪೌಷ್ಟಿಕ ಆಹಾರವನ್ನು ಸೇವಿಸಿ. ಹಣ್ಣು, ತರಕಾರಿ, ಧಾನ್ಯಗಳು, ಬೇಳೆ, ಕಾಳು, ನೀರಿನ ಸೇವನೆ ಅಗತ್ಯ. ಅರಿಶಿನ, ಶುಂಠಿ, ಚಕ್ಕೆ ಸೇವನೆ ಒಳ್ಳೆಯದು. ಉಪ್ಪು, ಸಕ್ಕರೆ, ಎಣ್ಣೆಯಲ್ಲಿ ಕರಿದ ಪದಾರ್ಥ, ಜಂಕ್ ಫುಡ್ ಆದಷ್ಟು ಕಡಿಮೆ ಮಾಡಿ. ಟೀ, ಕಾಫಿ ಕಡಿಮೆ ಸೇವಿಸಿ. ಏಳರಿಂದ ಎಂಟು ಗಂಟೆಯ ನಿದ್ರೆ ಅವಶ್ಯಕತೆ ಇದೆ.
ದಿನಾಲು ನಡಿಗೆ, ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮವನ್ನು ರೂಡಿಸಿಕೊಳ್ಳಿ. ಪ್ರಾಣಾಯಾಮದಲ್ಲಿ ಭಸ್ತ್ರಿಕ ಪ್ರಾಣಾಯಾಮ, ಕಪಾಲಭಾತಿ, ಅನುಲೋಮ ವಿಲೋಮ, ಉಜ್ಜಯಿ, ಬ್ರಮರಿ, ಶೀತಲಿ ಪ್ರಾಣಾಯಾಮ ಒಳ್ಳೆಯದು. ಯೋಗಾಸನದಲ್ಲಿ ಭುಜಂಗಾಸನ, ಧನುರಾಸನ, ಪಶ್ಚಿಮೋತ್ತಾಸನ, ಬದ್ಧಕೋನಾಸನ, ಊಷ್ಟ್ರಾಸನ, ವಿಪರೀತಕರಣಿ, ಚಕ್ರಾಸನ, ಶವಾಸನ ಒಳ್ಳೆಯದು.
ಆಯುರ್ವೇದ ಗಿಡಮೂಲಿಕೆಗಳು – ಅಲೋವೆರಾ, ಅಶ್ವಗಂಧ, ಶತಾವರಿ, ಅಶೋಕ ಮುಂತಾದವುಗಳು.






