ದೂಪದಕಟ್ಟೆಯಲ್ಲಿ ಚತುರ್ಥ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಾರ್ಕಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅತ್ತೂರು, ದೂಪದಕಟ್ಟೆ, ನಿಟ್ಟೆ ಇದರ ವತಿಯಿಂದ ಸೆ. 7ರಂದು ಚತುರ್ಥ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.
ಬೆಳಿಗ್ಗೆ 7.20ಕ್ಕೆ ವಿಗ್ರಹ ಪ್ರತಿಷ್ಠೆ, 7.30ರಿಂದ ಭಜನೆ, 8.30ಕ್ಕೆ ಗಣಪತಿ ಹೋಮ, ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, 12.30ಕ್ಕೆ ಮಹಾ ಅನ್ನಸಂತರ್ಪಣೆ, ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 1.30ರಿಂದ ಬಾಯ್ಸ್‌ ಝೋನ್‌ ಕಾರ್ಕಳ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ತರುಣ ಶಕ್ತಿ ಕಲಾವಿದೆರ್‌ ಕೊಡೆತ್ತೂರು ಕಟೀಲ್‌ ಇವರಿಂದ ಮದಿಮೆದ ಇಲ್ಲಡ್‌ ನಾಟಕ ಪ್ರದರ್ಶನಗೊಳ್ಳಲಿದೆ.
ಸಂಜೆ 4.30ರಿಂದ ಪಿಲಿನಲಿಕೆ, 5 ಗಂಟೆಗೆ ವಿಸರ್ಜನೆ, ರಾತ್ರಿ 8.30ಕ್ಕೆ ಜಲಸ್ತಂಭನವಾಗಿ ಅನ್ನಸಂತರ್ಪಣೆ ನೆರವೇರಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.











































































error: Content is protected !!
Scroll to Top