ನಾಲ್ಕು ದಿನ ಕಾರ್ಕಳದಲ್ಲಿ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ
ಕಾರ್ಕಳ : ಜೋಡುರಸ್ತೆಯಲ್ಲಿ ಟ್ರೆಂಡ್ಸ್ ಪಕ್ಕದಲ್ಲಿರುವ ಹೆಸರಾಂತ ಚಿನ್ನಾಭರಣ ಮಳಿಗೆ ʼಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ʼನಲ್ಲಿ ವಜ್ರದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ʼವಜ್ರೋತ್ಸವʼ (ಡೈಮಂಡ್ ಫೆಸ್ಟಿವಲ್) ಸೆ.4ರಿಂದ 7ರ ತನಕ ಬೆಳಗ್ಗೆ 11ರಿಂದ ಸಂಜೆ 6ರ ತನಕ ನಡೆಯಲಿದೆ.
ವಜ್ರೋತ್ಸವವನ್ನು ಇಂದು ಬೆಳಗ್ಗೆ 11 ಗಂಟೆಗೆ ಕಾರ್ಕಳ ತಾಲೂಕು ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಸವಿತಾ ವಿಜಯ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾರ್ಕಳದ ವರ್ಧಮಾನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥೆ ಶಶಿಕಲಾ ಕೆ. ಹೆಗ್ಡೆ ಮತ್ತು ಕಾರ್ಕಳ ಮೋಟಾರ್ಸ್ ಪಾಲುದಾರೆ ರೇಖಾ ಉಪಾಧ್ಯಾಯ ಭಾಗವಹಿಸಲಿದ್ದಾರೆ.































