ವೈದ್ಯಕೀಯ ವಿದ್ಯಾರ್ಥಿನಿಯ ಮತಾಂತರಕ್ಕೆ ಯತ್ನ : ಯುವಕ ಸೆರೆ

ಉಡುಪಿ: ಮಣಿಪಾಲದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಯುವಕ ತನ್ನ ಸಹಪಾಠಿ ಯುವತಿಯನ್ನು ಪ್ರೀತಿಸಿ ಬಳಿಕ ಮತಾಂತರಕ್ಕೆ ಒತ್ತಾಯಿಸಿದ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ದಿಲ್ಲಿಯ ಮಹಮ್ಮದ್‌ ಡ್ಯಾನಿಶ್ ಖಾನ್ ಹಾಗೂ ಯುವತಿ ರಾಜಸ್ಥಾನದ ಹಿಂದೂ ಸಮುದಾಯಕ್ಕೆ ಸೇರಿದವರು. ಯುವತಿಯೊಡನೆ ಸ್ನೇಹ ಪ್ರೇಮವಾಗಿ ಬದಲಾಗಿ ಮದುವೆಯ ಮಾತುಕತೆಯ ಹಂತಕ್ಕೆ ತಲುಪಿತ್ತು. ಆದರೆ ಮಹಮ್ಮದ್‌ ಡ್ಯಾನಿಶ್ ಖಾನ್ ದಿನ ಕಳೆದಂತೆ ನೀನು ಇಸ್ಲಾಂಗೆ ಮತಾಂತರ ಆಗಬೇಕು, ಕುರಾನ್ ಓದಬೇಕು ಎಂದು ತಾಕೀತು ಮಾಡುತ್ತಿದ್ದ. ಹಿಂದೂ ಧರ್ಮದ ಯಾವುದೇ ಆಚರಣೆಗಳನ್ನು ಮಾಡಬಾರದು, ದೇವರ ಆರಾಧನೆ ನಡೆಸಬಾರದು ಎಂಬಂತಹ ನಿಬಂಧನೆಗಳನ್ನು ಹಾಕಿದ್ದ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದಾಗಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಮ್ಮದ್ ಡ್ಯಾನಿಷ್ ಖಾನ್ ಹಿಂದೂ ಧರ್ಮ ಹಾಗೂ ಅಯೋಧ್ಯೆ ರಾಮ ಮಂದಿರದ ಬಗ್ಗೆ ಯುವತಿಯ ಮನಸ್ಸಿಗೆ ಒಪ್ಪದಂತಹ ಆರೋಪಗಳನ್ನ ಮಾಡುತ್ತಿದ್ದ. ಇದೇ ವಿಚಾರವಾಗಿ ಸಾಕಷ್ಟು ಬಾರಿ ಇಬ್ಬರ ನಡುವೆ ಜಗಳವಾಗಿದೆ. ಕಳೆದ ಒಂದೆರಡು ತಿಂಗಳಿಂದ ಡ್ಯಾನಿಷ್ ಖಾನ್ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದು, ತಡೆಯಲಾಗದೆ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರ ಸಲಹೆಯಂತೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈಗ ಪ್ರಕರಣದಲ್ಲಿ ಮತ್ತೆ ಡ್ರಗ್ ಜಾಲದ ಹೆಸರು ಕೇಳಿ ಬಂದಿದೆ. ಇದೊಂದು ವ್ಯವಸ್ಥಿತ ಮತಾಂತರಕ್ಕೆ ಯತ್ನ, ಲವ್ ಜಿಹಾದ್​ನ ಒಂದು ಭಾಗ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೂ ಹಾಜರುಪಡಿಸಿದ್ದಾರೆ. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

































































error: Content is protected !!
Scroll to Top