ಅಣ್ಣಾಮಲೈಗೆ ಕಹಿಸುದ್ದಿ ನೀಡಿದ ಸಮೀಕ್ಷೆ

ಹೊಸದಿಲ್ಲಿ: ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದ ಅಭ್ಯರ್ಥಿಗಳ ಪೈಕಿ ಮಾಜಿ ಐಪಿಎಸ್‌ ಅಧಿಕಾರಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಒಬ್ಬರು. ಅಣ್ಣಾಮಲೈ ಸ್ಫರ್ಧಿಸಿದ್ದಾರೆಂಬ ಕಾರಣಕ್ಕೆ ಕೊಯಂಬತ್ತೂರು ಕ್ಷೇತ್ರವೂ ಹೆಚ್ಚು ಸುದ್ದಿಯಲ್ಲಿತ್ತು. ಆದರೆ ನಿನ್ನೆ ಪ್ರಕಟವಾದ ಸಮೀಕ್ಷೆಗಳು ಮಾತ್ರ ಅಣ್ಣಾಮಲೈಗೆ ಕಹಿ ಸುದ್ದಿ ನೀಡಿವೆ.
ಅಣ್ಣಾಮಲೈಯಿಂದಾಗಿ ತಮಿಳುನಾಡಿನಲ್ಲಿ ಈ ಸಲ ಬಿಜೆಪಿ ಗಣನೀಯವಾಗಿ ಬಲವರ್ಧಿಸಿಕೊಳ್ಳಲಿದೆ. ಆದರೆ ಅಣ್ಣಾಮಲೈಗೆ ಎದುರಾಳಿ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋಲಾಗಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಭವಿಉಷ್ಯ ನುಡಿದಿವೆ. ಎದುರಾಳಿಗಳಾಗಿ ಡಿಎಂಕೆಯಿಂದ ನಗರದ ಮಾಜಿ ಮೇಯರ್ ಪಿ.ಗಣಪತಿ ರಾಜ್ಕುಮಾರ್ ಸ್ಪರ್ಧಿಸಿದ್ದರೆ, ಎಐಎಡಿಎಂಕೆಯಿಂದ ಸಿಂಗೈ ಜಿ.ರಾಮಚಂದ್ರನ್ ಸ್ಪರ್ಧಿಸಿದ್ದಾರೆ. ಆಕ್ಸಿಸ್‌ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕೊಯಂಬತ್ತೂರಿನಲ್ಲಿ ಇಂಡಿ ಮೈತ್ರಿಕೂಟದ ಡಿಎಂಕೆ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.

ಆದರೆ ಚುನಾವಣೋತ್ತರ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳದ ಅಣ್ಣಾಮಲೈ, ಜೂ.4ರಂದು ನಾವು ನಿಮಗೆ ಅಚ್ಚರಿಯ ಫಲಿತಾಂಶ ನೀಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ತಮಿಳುನಾಡನ್ನು ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ ಇಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ಹೋರಾಟ ನಡೆಸುತ್ತಿದೆ. ಸ್ವತಹ ಪ್ರಧಾನಿ ನರೇಂದ್ರ ಮೋದಿಯವರೇ ಕೊಯಂಬತ್ತೂರು ಸೇರಿದಂತೆ ತಮಿಳುನಾಡಿನ ಹಲವೆಡೆಗಳಲ್ಲಿ ಮೆಗಾ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದರು.
ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ವೃತ್ತಿಜೀವನ ಪ್ರಾರಂಭಿಸಿದ್ದು ಕಾರ್ಕಳದಲ್ಲಿ. ಹೀಗಾಗಿ ಕಾರ್ಕಳದ ಜನರೂ ಅಣ್ಣಾಮಲೈ ಫಲಿತಾಂಶದ ಬಗ್ಗೆ ಕುತೂಹಲ ಹೊಂದಿದ್ದಾರೆ. ರಾಜಕೀಯ ಸೇರಿದ ಬಳಿಕ ಕೂಡ ಅಣ್ಣಾಮಲೈ ಕರ್ನಾಕಟದ ಜತೆ ಉತ್ತಮ ನಂಟು ಇಟ್ಟುಕೊಂಡಿದ್ದಾರೆ.











































































error: Content is protected !!
Scroll to Top