ಸಿಇಟಿಯಲ್ಲಿ ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ – ವಿದ್ಯಾರ್ಥಿಗಳು ಕಂಗಾಲು

ಕಾರ್ಕಳ : ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ವೆಟರಿನರಿ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಿರ್ಣಾಯಕವಾದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ-2024) ಇಂದಿನಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದು, ಎರಡು ದಿನ ನಡೆಯಲಿದೆ. ಇಂದು ಬೆಳಗ್ಗೆ ಬಯೋಲಜಿ ಮತ್ತು ಗಣಿತ ಪರೀಕ್ಷೆ ನಡೆದಿದೆ. ಇವೆರಡರಲ್ಲೂ ಪಠ್ಯವನ್ನು ಹೊರತುಪಡಿಸಿದ ಪ್ರಶ್ನೆಗಳು ಬಂದಿದ್ದು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಕೆಲವು ಪಠ್ಯಗಳನ್ನು ತೆಗೆದು ಹಾಕಲಾಗಿತ್ತು. ಆದರೆ, ಈ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಂದು ನಡೆದ ಸಿಇಟಿಯಲ್ಲಿ ನೀಡಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ನಾಳೆ ಕೆಮಿಸ್ಟ್ರಿ ಮತ್ತು ಫಿಸಿಕ್ಸ್‌ ಪರೀಕ್ಷೆ ನಡೆಯಲಿದ್ದು, ಇದೇ ರೀತಿ ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಬರಲಿದೆಯೆ ಎಂದು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.







































































error: Content is protected !!
Scroll to Top