ಇಂದಿನಿಂದಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಜಾರಿ

ಹೊಸದಿಲ್ಲಿ : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲ ದಿನಗಳ ಹಿಂದೆ ಗ್ಯಾಸ್‌ ಬೆಲೆ ಇಳಿಕೆ ಮಾಡಿದ್ದ ಸರಕಾರ ಈಗ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನೂ ಇಳಿಸಿದೆ. ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ 2 ರೂ. ಕಡಿತಗೊಳಿಸಿವೆ. ಪರಿಷ್ಕೃತ ದರ ಮಾರ್ಚ್‌ 15 ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಗುರುವಾರ ಪ್ರಕಟಿಸಿದೆ.
ಬೆಲೆ ಇಳಿಕೆಯಿಂದ 58 ಲಕ್ಷ ಸರಕು ವಾಹನ, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಸಚಿವಾಲಯ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 94.72 ರೂ. ಆಗಲಿದೆ, ಪ್ರಸ್ತುತ ಲೀಟರ್‌ಗೆ 96.72 ರೂ., ಮತ್ತು ಡೀಸೆಲ್ ಬೆಲೆ 89.72 ರೂ. ಇದ್ದು 87.62 ರೂ. ಆಗಲಿದೆ.

















































error: Content is protected !!
Scroll to Top