ಕಾರ್ಕಳ : ನಿಟ್ಟೆ ಸುಫಲ ರೈತ ಉತ್ಪಾದಕ ಮತ್ತು ಹಲಸು ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭವು ಮಾ. 15ರಂದು ನೆರವೇರಲಿದೆ. ಇದರ ಉದ್ಘಾಟನೆಯನ್ನು ಡೈರೆಕ್ಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್ಎಂಇಯ ಡಾ. ಗ್ಲೋರಿ ಸ್ವರೂಪ ಅವರು ನೆರವೇರಿಸಲಿರುವರು.

ನಿಟ್ಟೆ ಪಡುಬಿದ್ರೆ ಹೆದ್ದಾರಿಯಲ್ಲಿರುವ ಈ ಘಟಕವು ಡಾ. ಎ. ಪಿ ಆಚಾರ್ಯ ಅವರ ಕನಸಿನ ಕೂಸಾಗಿದೆ. ಅವರ ಮೂಲಕ ಸುಫಲ ರೈತ ಉತ್ಪಾದಕ ಘಟಕವು ಸುಮಾರು ಮೂರು ವರುಷಗಳ ಕಾಲ ಹಲಸಿನ ಹಣ್ಣಿನ ಬಗ್ಗೆ ಅಧ್ಯಯನ ಮಾಡಿ, ಅದರಿಂದ ತಯಾರಿಸಲಾಗುವ ವಿವಿಧ ಖಾದ್ಯಗಳು ಮತ್ತು ಆರೋಗ್ಯಕ್ಕೆ ಆಗುವ ಉಪಯೋಗಗಳ ಮೂಲಕ, ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು, ಅವರಿಗೆ ಆರ್ಥಿಕವಾಗಿ ಸಹಕಾರಿಯಾಗಲು ಈ ಘಟಕದ ನಿರ್ಮಾಣವಾಗಿದೆ.

ಹಲಸು ಬೆಳೆಗಾರರಿಗೆ ಉತ್ತಮ ಆದಾಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಂಎಸ್ಎಂಇಯ ಅಧೀನದಲ್ಲಿ ಹಾಗೂ ಧರ್ಮಸ್ಥಳ ಸಿರಿ ಉತ್ಪನ್ನ ಘಟಕದ ಮೂಲಕ ಈ ಸುಫಲ ರೈತ ಉತ್ಪಾದಕ ಘಟಕವು ನಿರ್ಮಾಣ ಗೊಂಡಿರುತ್ತದೆ ನವೀನ್ ನಾಯಕ್ ಮತ್ತು ರಮೇಶ್ ಕಾಮತ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

























