ಕಾರ್ಕಳ : ಕಾರ್ಕಳದ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷೆ ಹಾಗೂ ರಾಷ್ಟ್ರಮಟ್ಟದ ತರಬೇತಿದಾರರಾಗಿರುವ ಎಎಲ್‌ಟಿ ಗೈಡ್ ಕ್ಯಾಪ್ಟನ್ ಕಾರ್ಕಳದ ಸಾವಿತ್ರಿ ಮನೋಹರ್ ಇವರ 39 ವರ್ಷಗಳ ಸಾರ್ಥಕ ಸೇವೆ ಪರಿಗಣಿಸಿ ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಮಾರ್ಗದರ್ಶನದಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ರಾಜ್ಯ ಆಯುಕ್ತರ ಸಮಾವೇಶದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು
ನಿವೃತ್ತಿಯ ನಂತರವೂ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಾವಿತ್ರಿ ಮನೋಹರ್ ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. 24 ಪುಸ್ತಕಗಳನ್ನು ಬರೆದಿರುವ ಸಾವಿತ್ರಿ ಮನೋಹರ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಗೆ ಅಪಾರ ಕೊಡುಗೆ ನೀಡಿದ್ದಾರೆ. 75ರ ಇಳಿ ವಸ್ಸಿನಲ್ಲೂ ಸದಾ ಕಾರ್ಯಮಗ್ನರಾಗಿದ್ದು ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಅವರು ಎಲ್ಲರಿಗೂ ಮಾದರಿ ಎಂದು ರಾಜ್ಯ ಗೈಡ್ ಆಯುಕ್ಷತೆ ಗೀತಾ ನಟರಾಜ್ ಮತ್ತು ಜೊತೆ ಕಾರ್ಯದರ್ಶಿ ರಾಮಲತಾ ಪ್ರಶಂಶಿಸಿದ್ದಾರೆ. ಸಂಘಟನಾ ಆಯುಕ್ಷತೆ ಮಂಜುಳಾ ಕಾರ್ಯಕ್ರಮ ಸಂಘಟಿಸಿದ್ದರು.
ಸಾವಿತ್ರಿ ಮನೋಹರ್‌ಗೆ ಸ್ಕೌಟ್ಸ್ & ಗೈಡ್ಸ್ ರಾಜ್ಯ ಪ್ರಶಸ್ತಿ








































