ಕಾರ್ಕಳ : ಸೋಮವಾರ ರಾತ್ರಿ ಚಂದ್ರದರ್ಶನವಾಗಿರುವುದರಿಂದ ಮುಸ್ಲಿಮರ ಪವಿತ್ರ ರಮ್ಜಾನ್ ಉಪವಾಸ ಮಂಗಳವಾರದಿಂದ ಪ್ರಾರಂಭವಾಗಿದೆ. ಮಂಗಳವಾರದಿಂದ ರಮ್ಜಾನ್ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ಪರವಾಗಿ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ.
ಪವಿತ್ರ ರಮ್ಜಾನ್ ಮಾಸವನ್ನು ಆಚರಿಸಲು ಮುಸ್ಲಿಮರು ಮಂಗಳವಾರದಿಂದ ಒಂದು ತಿಂಗಳ ಉಪವಾಸವನ್ನು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ ನಿತ್ಯ ದಿನವಡೀ ಉಪವಾಸ ಇದ್ದು, ಐದು ಹೊತ್ತು ಪ್ರಾರ್ಥನೆ, ದಾನಧರ್ಮ ಇತ್ಯಾದಿ ಪುಣ್ಯಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ.
ಇಂದಿನಿಂದ ರಮ್ಜಾನ್ ಉಪವಾಸ ಆರಂಭ















































