ಕೌಡೂರಿನಲ್ಲಿ ಅಗ್ನಿ ಅವಘಡ

ಕಾರ್ಕಳ : ಕೌಡೂರಿನ ಮಾಣಿಕುಮೇರಿ ಎಂಬಲ್ಲಿ ಟ್ರಾನ್ಸ್‌ಫಾರ್ಮರ್‌ ಸಮೀಪ ಬೆಂಕಿ ಹತ್ತಿಕೊಂಡಿರುವ ಘಟನೆ ಮಾ. 8ರಂದು ಮಧ್ಯಾಹ್ನ ಸಂಭವಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಎಚ್ಚೆತ್ತುಕೊಂಡಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ರಾನ್ಸ್‌ಫಾರ್ಮರ್‌ನಿಂದ ಕಿಡಿ ಬಿದ್ದು ಬೆಂಕಿ ಹತ್ತಿಕೊಂಡಿರಬಹುದು ಎನ್ನಲಾಗುತ್ತಿದೆ. ಸ್ಥಳೀಯರಾದ ಮಹೇಶ್ ಶೆಟ್ಟಿ, ಮಲ್ಲಿಕಾ ಶೆಟ್ಟಿ, ರಾಕೇಶ್ ಶೆಟ್ಟಿ, ಶರಣ್ಯ ಶೆಟ್ಟಿ, ವಿಕಾಸ್ ಸೇರಿದಂತೆ ಮೊದಲಾದವರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.







































































error: Content is protected !!
Scroll to Top