ಕಾರ್ಕಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪಳ್ಳಿ ನಿಂಜೂರು ಘಟಕದ ವತಿಯಿಂದ ಮಾ. 2ರಂದು ಪಳ್ಳಿಯ ರಾಮಕೃಷ್ಣ ಸಭಾಭವನದದಲ್ಲಿ ನಡೆದ ಘಟಕದ ಐದನೇ ವರ್ಷದ ವಾರ್ಷಿಕೋತ್ಸವ ಮತ್ತು ಪಳ್ಳಿ ನಿಂಜೂರು ಯಕ್ಷ ಮಿತ್ರರು ಇದರ 7ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಬಹುಮೇಳಗಳ ವ್ಯವಸ್ಥಾಪಕ ಪಳ್ಳಿ ಕಿಶನ್ ಹೆಗ್ಡೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಪಳ್ಳಿ ಗ್ರಾ. ಪಂ. ಅಧ್ಯಕ್ಷೆ ಉಷಾ ಯು. ಅಂಚನ್, ಮುನಿಯಾಲು ಉದಯಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಮುಂಬೈ ಹೈಕೋರ್ಟ್ ವಕೀಲ ಭೋಜ ನಾರಾಯಣ ಪೂಜಾರಿ ಕಾಂತನಮಜಲು, ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕ ಅಧ್ಯಕ್ಷ ಗಣೇಶ್ ಶೆಟ್ಟಿ ಗೋವಾ ಮೊದಲಾದವರು ಉಪಸ್ಥಿತರಿದ್ದರು.


































