ಕಾರ್ಕಳ : ಆನೆಕೆರೆ ಚತುರ್ಮುಖ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಮಂಡಲ ಪೂಜಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಮಾ. 9ರಂದು ಜರುಗಲಿದೆ.
ಬೆಳಿಗ್ಗೆ 11ಕ್ಕೆ ಮುಖವಸ್ತ್ರ ಉದ್ಘಾಟನೆ, ನಂತರ ಸ್ವಾಮಿಗೆ ನವಕಲಶ ಅಭಿಷೇಕ ಹಾಗೂ ಮೇಗಿನನೆಲೆಯಲ್ಲಿ ಕ್ಷೀರಾಭಿಷೇಕ, ಕ್ಷೇತ್ರಪಾಲ ಮತ್ತು ನಾಗ ಸನ್ನಿಧಿಯಲ್ಲಿ ಕ್ಷೀರಾಭಿಷೇಕ ಮತ್ತು ಮಹಾಪೂಜೆ, ಧರ್ಮದೇವತೆಗಳ ಸಾನಿಧ್ಯದಲ್ಲಿ ಪನಿವಾರ ಪೂಜೆ ಮತ್ತು ಮಹಾಮಂಗಳಾರತಿ, ಮಧ್ಯಾಹ್ನ 3ರಿಂದ ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಭಕ್ತಾಮರ ಆರಾಧನೆ, ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಜ್ರಪಂಜರ ಯಂತ್ರ ಆರಾಧನೆ, ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ಶಾಂತಿಚಕ್ರ ವಿಧಾನ, ಶ್ರೀ ವರ್ಧಮಾನ ಸನ್ನಿಧಿಯಲ್ಲಿ ಸರ್ವದೋಷ ಪ್ರಾಯಶ್ಚಿತ ವಿಧಾನ, ಮೇಗಿನನೆಲೆ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಕಲಿಕುಂಡ ಯಂತ್ರರಾಧನೆ ಮತ್ತು ಸಂಜೆ 6.30 ಗಂಟೆಗೆ ಮಹಾಮಂಗಳಾರತಿ ಇತ್ಯಾದಿಗಳು ನಡೆಯಲಿವೆ.
ಸಂಜೆಯ ಆರಾಧನಾ ಪೂಜೆ ಹಾಗೂ ಸೇವಾಕರ್ತೃಗಳ ವಿವರ – ಶ್ರೀ ಆದಿನಾಥ ಸ್ವಾಮಿಗೆ ‘ಭಕ್ತಾಮರ ಆರಾಧನೆ’ – ಕಿರಣ್ ಜೈನ್ ಬೆಂಗಳೂರು, ಶ್ರೀ ಚಂದ್ರನಾಥ ಸ್ವಾಮಿಗೆ ‘ವಜ್ರಪಂಜರ ಯಂತ್ರ ಆರಾಧನೆ’ – ಕೀರ್ತಿ ಪ್ರಸಾದ್ ಕಾರ್ಕಳ, ಶ್ರೀ ಶಾಂತಿನಾಥ ಸ್ವಾಮಿಗೆ ‘ಶಾಂತಿಚಕ್ರ ಆರಾಧನೆ’ – ಶಾಂತ ಕುಮಾರ್, ಜಯಪುರ ಶ್ರೀ ವರ್ಧಮಾನ ಸ್ವಾಮಿಗೆ ‘ಸರ್ವದೋಷ ಪ್ರಾಯಶ್ಚಿತ ಆರಾಧನೆ’ – ಭರತ್ ರಾಜ್ ಇಂದ್ರ, ಕಾರ್ಕಳ ಶ್ರೀ ಪಾರ್ಶ್ವನಾಥ ಸ್ವಾಮಿಗೆ ‘ಕಲಿಕುಂಡ ಆರಾಧನೆ’ – ಧನಕೀರ್ತಿ ಕಡಂಬ ಕಾರ್ಕಳ.







































