ಫೆ. 24-25 : ಗೋಲ್ದಿಂಡಿ ಶ್ರೀ ನಾಗಬ್ರಹ್ಮ ದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಾರ್ಕಳ : ಕೊಳಕೆ ಇರ್ವತ್ತೂರು ಗೋಲ್ದಿಂಡಿ ಶ್ರೀ ನಾಗಬ್ರಹ್ಮ ದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ಧರ್ಮ ದೈವಗಳಿಗೆ ದೊಂದಿಯ ಸಿರಿ ಸಿಂಗಾರ ನೇಮೋತ್ಸವ ಫೆ. 24-25ರಂದು ನಡೆಯಲಿದೆ. ವೇದಮೂರ್ತಿ ನಾರಾವಿ ಶ್ರೀ ಗುರುರಾಜ ಭಟ್‌ ಅವರ ಮಾರ್ಗದರ್ಶನದಲ್ಲಿ ತಂಡ್ರಕೆರೆ ಶ್ರೀ ಅನಂತ ಭಟ್‌ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.

ಫೆ. 24ರಂದು ಬೆಳಗ್ಗೆ 8ಗಂಟೆಗೆ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪಂಚಗವ್ಯಪೂರ್ವಕ ಪುಣ್ಯ ವಾಚನ, ಆಶ್ಲೇಷಾ ಬಲಿ, ಪಂಚವಿಂಶತಿ, ಕಲಶ ಪ್ರಧಾನ ಹೋಮ, ದೈವಗಳಿಗೆ ತೋರಣ ಮುಹೂರ್ತ, ನವಕ ಕಲಶ ಹೋಮ, ದೈವಗಳಿಗೆ ಪರ್ವ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಗಂಟೆಗೆ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರಿಂದ ಶ್ರೀ ಸತ್ಯನಾರಾಯಣ ಪೂಜೆಯ ಉದ್ಯಾಪನಾ ಕಲಶ ಪ್ರರಿಷ್ಠಾಪನೆ, ರಾತ್ರಿ 7ಗಂಟೆಗೆ ಅಷ್ಟಾವದಾನ ಸೇವೆ ಮತ್ತು 8 ಗಂಟೆಗೆ ಮಹಾ ಪೂಜೆ ನಡೆಯಲಿದೆ.

ಫೆ. 25ರಂದು ಬೆಳಿಗ್ಗೆ 9ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯ ಉದ್ಯಾಪನಾ ಹೋಮ, 10ಗಂಟೆಗೆ ಶ್ರೀ ಸತ್ಯನಾರಾಯಣ ಕಥೆ, 11 ಗಂಟೆಗೆ ನಾಗನಿಗೆ ತನು ತಂಬಿಲ, ದೈವಗಳಿಗೆ ಪರ್ವ, ಪನಿಹಾರ ಸೇವೆ, 12.30ಕ್ಕೆ ಮಹಾಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7ರಿಂದ ಧರ್ಮ ದೈವಗಳಾದ ಮೈಸಂದಾಯ, ರಕ್ತೇಶ್ವರಿ, ಪಿಲಿಚಾವುಂಡಿ, ದುಗ್ಗಲಾಯ ಮತ್ತು ಪಟ್ಟದ ಪಂಜುರ್ಲಿ ದೈವಗಳಿಗೆ ದೊಂದಿಯ ಸಿರಿಸಿಂಗಾರ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.







































































error: Content is protected !!
Scroll to Top