ಕಾರ್ಕಳ : ಮಾಳಗೇಟ್ ಹತ್ತಿರ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಂದಕಕ್ಕೆ ನುಗ್ಗಿದ ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಜ. 28ರಂದು ಹೊರನಾಡಿನಿಂದ ಮಂಗಳೂರಿನತ್ತ ಹೋಗುತ್ತಿದ್ದ ಇನ್ನೋವಾ ಕಾರು ಮಾಳಗೇಟ್‌ನ ಬಳಿ ಎಸ್.ಕೆ ಬೋರ್ಡರ್‌ನಲ್ಲಿ ಅವಘಡಕ್ಕೊಳಗಾಗಿದೆ.
ಮಂಗಳೂರು ಅಶೋಕ್ ನಗರದ ಪುಷ್ಪಾವತಿ, ದಯಾನಂದ, ಶರ್ಮಿಳಾ, ಮೌನೀಶ್ ಗಾಯಗೊಂಡವರು. 108 ಅಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.






























