ಕಾರ್ಕಳ : ಮುದ್ದಣ್ಣನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಜ. 20ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಸಂಜೆ 6 ಗಂಟೆಗೆ ಅಂಗನವಾಡಿ ಮಕ್ಕಳಿಂದ ನೃತ್ಯ, ಬಳಿಕ ಶಾಲಾ ಮಕ್ಕಳಿಂದ ಶ್ರೀ ದೇವಿ ಸರ್ವಮಂಗಳೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿರುವುದು. 9.30ರಿಂದ ಶಾಲಾ ನೃತ್ಯ ವೈವಿಧ್ಯ, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಕಿನ್ನಿಗೋಳಿ ವಿಜಯಾ ಕಲಾವಿದರು ತಂಡದವರಿಂದ ತೊಟ್ಟಿಲ್ ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ.
ಜ. 20 : ಮುದ್ದಣ್ಣನಗರ ಶಾಲಾ ವಾರ್ಷಿಕೋತ್ಸವ































