ಜ. 20 : ಜನನಿ ಮಿತ್ರ ಮಂಡಳಿ ವಾಂಟ್ರಾಯಿ ಪದವು – 23ನೇ ವಾರ್ಷಿಕೋತ್ಸವ

ಕಾರ್ಕಳ : ವಾಂಟ್ರಾಯಿ ಪದವು ಜನನಿ ಮಿತ್ರ ಮಂಡಳಿಯ 23ನೇ ವಾರ್ಷಿಕೋತ್ಸವ ಜ. 20ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಡಳಿಯ ಅಧ್ಯಕ್ಷ ಸದಾಶಿವ ನಕ್ರೆ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಫೆಡೆರೇಶನ್‌ ಆಫ್‌ ಕ್ವಾರಿ ಮತ್ತು ಕ್ರಶರ್‌ ಓನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ರಾಷ್ಟ್ರೀಯ ತರಬೇತುಗದಾರ ರಾಜೇಂದ್ರ ಭಟ್‌, ನಿಟ್ಟೆ ಗ್ರಾ. ಪಂ. ಅಧ್ಯಕ್ಷೆ ಶೋಭಾ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭ ನಾಟಿ ವೈದ್ಯ ಓಡಿ ಮೇಸ್ತ್ರಿ ಅವರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮ – ಕದಂಬ ನಾಟಕ
ಸ್ಥಳೀಯ ಕಲಾವಿದರು ಮತ್ತು ಕಲಾವಿದರಿಂದ ನೃತ್ಯ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಬಳಿಕ ರಂಗಭೂಷಣ ಮಣಿ ಕೋಟೆಬಾಗಿಲು ರಚನೆ ಮತ್ತು ನಿರ್ದೇಶನದ ಪಿಂಗಾರ ಕಲಾವಿದರು ಬೆದ್ರ ಅಭಿನಯಿಸುವ ಕದಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































































error: Content is protected !!
Scroll to Top