ಕಾರ್ಕಳ : ಸ್ಕೂಟರ್ ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಣೂರು ಗ್ರಾಮದ ಮುದ್ದಣ್ಣನಗರ ಬೆರ್ಕೆದಗುರಿ ಎಂಬಲ್ಲಿ ಜ. 17ರಂದು ಸಂಜೆ ಸಂಭವಿಸಿದೆ.
ಶ್ರೀರಾಮನಗರ ನಿವಾಸಿ ಹರೀಶ (46) ಮೃತ ದುರ್ದೈವಿ. ಹರೀಶ್ ಟಿವಿಎಸ್ ವೇಗೋ ಸ್ಕೂಟರ್ (KA-20-ED-5665) ನಲ್ಲಿ ಮುದ್ದಣ್ಣ ನಗರ ಕಡೆಯಿಂದ ತನ್ನ ಮನೆಯಾದ ಶ್ರೀರಾಮನಗರ ಕಡೆಗೆ ಇಳಿಜಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಸ್ಕೂಟರ್ ಸಮೇತ ತೋಡಿಗೆ ಬಿದ್ದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

































