ಕೇಂದ್ರ ಸಚಿವೆ ಸಾಧ್ವಿ ನಿರಂಜನ್‌ ಜ್ಯೋತಿ ಕಿಡ್ನ್ಯಾಪ್‌ ಯತ್ನ

ಲಖನೌ: ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಯುವಕನೊಬ್ಬ ಅಪಹರಿಸಲು ಯತ್ನಿಸಿದ ಘಟನೆ ಸಂಭವಿಸಿದ್ದು, ಭದ್ರತಾ ಸಿಬ್ಬಂದಿ ಈ ಯತ್ನವನ್ನು ವಿಫಲಗೊಳಿಸಿ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಸಚಿವೆ ದಿಲ್ಲಿಯಿಂದ ಲಖನೌಗೆ ಆಗಮಿಸುತ್ತಿದ್ದರು ಎನ್ನಲಾಗಿದೆ.
ಸಚಿವೆ ಸಾಧ್ವಿ ಕಾರು ಚಾಲಕ ನೀಡಿದ ದೂರಿನ ಪ್ರಕಾರ, ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಚಿವರನ್ನು ಕರೆ ತರುವ ನಿಟ್ಟಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬಂತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಧಾಬಾ ಬಳಿ ಟೀ ಕುಡಿಯಲು ನಿಲ್ಲಿಸಿದ್ದ ವೇಳೆ ವ್ಯಕ್ತಿಯೊಬ್ಬ ದಿಢೀರನೆ ಬಂದು ಗನ್ ತೋರಿಸಿ ಕಾರಿನೊಳಗೆ ಕುಳಿತು ಚಾಲಕನನ್ನು ಕೆಳಗಿಳಿಸಿದ್ದಾನೆ. ಕಾರಿನ ಸಹಿತ ಪರಾರಿಯಾಗಲು ಯತ್ನಿಸಿದ್ದ ವೇಳೆ ಭದ್ರತಾ ಸಿಬಂದಿ ಕಾರನ್ನು ಸುತ್ತುವರಿದು, ಯುವಕನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಭವಿಸುವಾಗ ಸಚಿವೆ ಕಾರಿನಲ್ಲಿ ಇರಲಿಲ್ಲ. ಆದರೆ ಪೊಲೀಸರು ಸಚಿವೆಯ ಅಪಹರಣ ಯತ್ನ ಕೇಸು ದಾಖಲಿಸಿದ್ದಾರೆ.







































































error: Content is protected !!
Scroll to Top