ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ನ್ಯೂಸ್ ಕಾರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಹಾಗೂ ಕಾರ್ಕಳ ಡಾ. ಟಿ.ಎಂ.ಪೈ ರೋಟರಿ ಆಸ್ಪತ್ರೆ ಇವರ ಸಹಯೋಗದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರದಲ್ಲಿ ವೈದ್ಯರು ಸೂಚಿಸಿದವರಿಗೆ ಡಿ.10ರಂದು ನಲವತ್ತೊಂದು ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.

ಆರೋಗ್ಯ ಶಿಬಿರದಲ್ಲಿ ಹೃದಯ ಪರೀಕ್ಷೆ, ಇಸಿಜಿ, ಕಣ್ಣು, ಕಿವಿ-ಮೂಗು- ಗಂಟಲು, ಮೂಳೆ ಮತ್ತು ಕೀಲು, ಬೆನ್ನು ನೋವು ಪರೀಕ್ಷೆ ನಡೆಸಲಾಗಿತ್ತು. ಸುಮಾರು 168 ಮಂದಿ ಶಿಬಿರದ ಪ್ರಯೋಜನ ಪಡೆದಿದ್ದು, 41 ಮಂದಿಗೆ ಕನ್ನಡಕ್ಕಾಗಿ ವೈದ್ಯರು ಸೂಚಿಸಿದ್ದರು.
ಸಂಘದ ಅಧ್ಯಕ್ಷ ಸಂದೀಪ್ ಪೂಜಾರಿ, ಯರ್ಲಪಾಡಿಯ ವಸಂತಿ ಶೆಟ್ಟಿ, ಕುಕ್ಕುಂದೂರು ನೆಲ್ಲಿಗುಡ್ಡೆ ಜಾನಕಿ ಕನ್ನಡಕ ವಿತರಿಸಿದರು. ಗಣೇಶ್ ಪೈ ಕಾರ್ಯಕ್ರಮ ನಿರೂಪಿಸಿದರು.































