ಮಂಜರಪಲ್ಕೆ : ಭೀಕರ ಅಪಘಾತ

ಕಾರ್ಕಳ : ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಮಂಜರಪಲ್ಕೆ ಬಳಿ ಖಾಸಗಿ ಬಸ್ ಹಾಗೂ ಪಿಕಪ್ ನ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೆ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಡಿ. 10ರಂದು ಸಂಜೆ ಸಂಭವಿಸಿದೆ. ಕಾರ್ಕಳದಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದ ಬಸ್, ಬೆಳ್ಮಣ್ ನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಪಿಕಪ್ ಓವರ್ ಟೇಕ್ ಮಾಡುವ ಸಂದರ್ಭ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪಿಕಪ್ ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜೀಪಿನಲ್ಲಿದ್ದವರು ದೈವದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ.







































































error: Content is protected !!
Scroll to Top