ಪ್ರತಿದಿನ 8 ಗಂಟೆಗಳ ನಿದ್ದೆ ಅವಶ್ಯ – ಡಾ. ಅಂಕಿತಾ
ಕಾರ್ಕಳ : ಆರೋಗ್ಯಕರ ಜೀವನಕ್ಕೆ ಪ್ರತಿದಿನ 8 ಗಂಟೆಗಳ ನಿದ್ದೆ ಬಹಳ ಮುಖ್ಯ. ಸರಿಯಾಗಿ ನಿದ್ದೆ ಮಾಡುವುದರಿಂದ ಮೆದುಳಿನ ಆರೋಗ್ಯದೊಂದಿಗೆ ಮನಸ್ಸು ಉಲ್ಲಾಸದಿಂದಿರಲು ಸಾಧ್ಯವಾಗುವುದು ಡಾ. ಅಂಕಿತಾ ಎಂ.ಎಸ್. ತಿಳಿಸಿದರು. ಅವರು ಅ. 17ರಂದು ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಕಾರ್ಕಳದ ಜ್ಞಾನಸುಧಾ ಪ್ರೌಢಶಾಲೆಯಲ್ಲಿ ಒತ್ತಡ ಮತ್ತು ಆತಂಕ ನಿವಾರಣೆ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು. ಒತ್ತಡ ನಿವಾರಣೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತು ನಿಗದಿತ ಸಮಯದ ನಿದ್ದೆ ಅವಶ್ಯ. ವಿದ್ಯಾರ್ಥಿಗಳು ಸದೃಢರಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುವುದು ಎಂದವರು ಹೇಳಿದರು.
ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೋ, ವಲಯಾಧ್ಯಕ್ಷ ರವೀಂದ್ರನಾಥ್ ಹೆಗ್ಡೆ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್, ಶಾಲಾ ಮುಖ್ಯ ಶಿಕ್ಷಕಿ ಉಷಾ ಯು. ರಾವ್, ಕಾರ್ಯದರ್ಶಿ ಮಂಜುನಾಥ ಟಿ. ರಾವ್., ಕೋಶಾಧಿಕಾರಿ ವಿಜೇಶ್ ಶೆಟ್ಟಿ, ಹಾಗೂ ಕ್ಲಬ್‌ನ ಸದಸ್ಯರಾದ ಯೋಗೇಶ್ ನಾಯಕ್, ಟಿ.ಕೆ. ರಘುವೀರ್, ರಘುನಾಥ ಕೆ.ಎಸ್., ಗೋಪಾಲ ಅಂಚನ್ ಉಪಸ್ಥಿತರಿದ್ದರು. ಸಾಯಿರಾಮ್ ಕಾರ್ಯಕ್ರಮ ನಿರ್ವಹಿಸಿದರು.











































