ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ
ಕಾರ್ಕಳ : ಮಾಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅ. 13 ರಂದು ಬೆಳಿಗ್ಗೆ 9ರಿಂದ 4 ಗಂಟೆಯವರಿಗೆ ಅಂಚೆ ಜನ ಸಂಪರ್ಕ ಅಭಿಯಾನ – ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ ನಡೆಯಲಿದೆ.
ಅಗತ್ಯ ದಾಖಲೆಗಳು (ಇವುಗಳಲ್ಲಿ ಯಾವುದಾದರೂ ಒಂದು)
ಜನ್ಮ ದಿನಾಂಕ ಬದಲಾವಣೆಗೆ ಜನನ ಪ್ರಮಾಣ ಪತ್ರ, ಪಾಸ್ ಪೋರ್ಟ್, ಅಂಕಪಟ್ಟಿ, ಸರ್ವೀಸ್ ಪೋಟೋ, ಐಡಿ ಕಾರ್ಡ್, ಹೆಸರು ಬದಲಾವಣೆಗೆ ವಾಹನ ಚಾಲನಾ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಅಂಕ ಪಟ್ಟಿ, ಮದುವೆ ಪ್ರಮಾಣ ಪತ್ರ, ಪಾನ್ ಕಾರ್ಡ್, ರೇಷನ್ ಕಾರ್ಡ್, ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್, ವೋಟರ್ ಐಡಿ, ವಿಳಾಸ ಬದಲಾವಣೆಗೆ ಪಾಸ್ ಪೋರ್ಟ್, ಅಂಚೆ/ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ವೋಟರ್ ಐಡಿ, ಇನ್ಸುರೆನ್ಸ್ ಪಾಲಿಸಿ, ವಾಸ್ತವ್ಯ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ, ಫೋಟೋ ಇರುವ ಪ್ರಮಾಣ ಪತ್ರ ಹಾಗೂ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ಬೇಕಾಗುವ ದಾಖಲೆಗಳು ಜನ್ಮ ದಾಖಲೆ, ತಂದೆ/ತಾಯಿಯ ಆಧಾರ್ ಕಾರ್ಡ್, ತಂದೆ/ತಾಯಿಯ ಮಗುವಿನೊಂದಿಗೆ ಬರಬೇಕು. ಅಗತ್ಯ ದಾಖಲೆಗಳ ಮೂಲ ಪ್ರತಿಯನ್ನು ಪರಿಶೀಲನೆಗಾಗಿ ತರತಕ್ಕದ್ದು.

ಅಂಚೆ ಇಲಾಖೆಯಲ್ಲಿ ರೂ. 396 ರೂ.ಗೆ 10 ಲಕ್ಷದ ಅಪಘಾತ ವಿಮೆ, ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ, ಅಂಚೆ ಉಳಿತಾಯ ಖಾತೆಗಳಿಗೆ ಆಧಾರ್ ಜೋಡನೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ, ಗಂಡು ಮಕ್ಕಳಿಗಾಗಿ ಸುಕುಮಾರ ಸಮೃದ್ಧಿ ಯೋಜನೆ, ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಮೊಬೈಲ್ ಬ್ಯಾಕಿಂಗ್, ಸಮೂಹ ಅಪಘಾತ ವಿಮೆ ಸೌಲಭ್ಯ ಲಭ್ಯ.































