ಕ್ರಿಯೇಟಿವ್‌ – ಎನ್‌ಎಸ್‌ಎಸ್‌ ಶಿಬಿರದ ಪೂರ್ವಭಾವಿ ಸಭೆ

ಕಾರ್ಕಳ : ಅಕ್ಟೋಬರ್‌ 12ರಿಂದ 18 ರವರೆಗೆ ಮೂರೂರಿನಲ್ಲಿ ನಡೆಯಲಿರುವ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಎನ್‌ಎಸ್‌ಎಸ್‌ ಘಟಕದ ವಾರ್ಷಿಕ ಶಿಬಿರದ ಪೂರ್ವಭಾವಿ ಸಭೆ ಸೆ. 3ರಂದು ಕಾಲೇಜಿನಲ್ಲಿ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ, ಶಿಬಿರದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಶಿಬಿರದ ಸಂಯೋಜಕ ಉಮೇಶ್‌ ಮಾತನಾಡಿ, ಶಿಬಿರದ ಪೂರ್ವ ತಯಾರಿಯ ರೂಪುರೇಷೆಗಳು, ಅಗತ್ಯತೆ ಮತ್ತು ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಉದ್ಯಮಿ ಚೇತನ್‌ ಶೆಟ್ಟಿ, ಸರ್ವೋತ್ತಮ ಕಡಂಬ, ವಾಸು ಶೆಟ್ಟಿ, ಹರಿಶ್ಚಂದ್ರ ಕುಲಾಲ್‌, ಚಂದ್ರಶೇಖರ್‌ ಹೆಗ್ಡೆ, ಕೆ. ಶಾಂತರಾಮ್‌ ಹೆಗ್ಡೆ, ಮಹಾವೀರ ಕಡಂಬ ಹಾಗೂ ವಿವಿಧ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.

































































error: Content is protected !!
Scroll to Top