ಪಳ್ಳಿ : ಇಬ್ಬರ ವಿರುದ್ಧ‌ ಪೋಕ್ಸೋ ಕೇಸ್‌ ದಾಖಲು – ತಲೆಮರೆಸಿಕೊಂಡ ಆರೋಪಿಗಳು

ಕಾರ್ಕಳ : ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಸುಜಿತ್‌ ಪೂಜಾರಿ ಹಾಗೂ ಅಭಿನಂದನ್‌ ಶೆಟ್ಟಿ ವಿರುದ್ಧ ಸೆ. 28 ರಂದು ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ. ನಿಂಜೂರು ಬೋಪಾಡಿ ಸಮೀಪ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ದೂರು ನೀಡಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

































































































error: Content is protected !!
Scroll to Top