ದೇವಿಯ ಅನುಗ್ರಹದಿಂದ ಅನ್ನಪೂರ್ಣೇಶ್ವರಿ ದೇವಾಲಯ ನಿರ್ಮಾಣ : ಶಿವಸುಜ್ಞಾನಮೂರ್ತಿ ಸ್ವಾಮೀಜಿ

ಹೆಬ್ರಿಯಲ್ಲಿ ಚಾತುರ್ಮಾಸ್ಯದ 86ನೇ ದಿನದ ವ್ರತಾನುಷ್ಠಾನದ ಧಾರ್ಮಿಕ ಸಭೆ

ಹೆಬ್ರಿ : ಹೆಬ್ರಿ ತಾಲೂಕು ಕಜ್ಕೆಯಲ್ಲಿರುವ ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಾಖಾ ಮಠದಲ್ಲಿ ಅನ್ನಪೂರ್ಣೇಶ್ವರಿ ದೇವಾಲಯ ನಿರ್ಮಾಣ ಆಗುತ್ತಿರುವುದು ದೇವಿಯ ಅನುಗ್ರಹದಿಂದ, ನಾವು ಇಲ್ಲಿ ನಿಮಿತ್ತ ಮಾತ್ರ ಎಂದು ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿಯವರು ಹೇಳಿದರು. ಅವರು ಸೆ. 26 ರಂದು 41ನೇ ಚಾತುರ್ಮಾಸ್ಯದ 86ನೇ ದಿನದ ವ್ರತಾನುಷ್ಠಾನದ ಧಾರ್ಮಿಕ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ಹತ್ತು ವರ್ಷಗಳ ಹಿಂದೆ ಈ ದೇವಾಲಯ ನಿರ್ಮಾಣಕ್ಕಾಗಿ ಎರಡು ಎಕರೆ ಜಾಗವನ್ನು ನೀಡಿರುವ ಸ್ಥಳದಾನಿಗಳು ಶ್ರೀಧರ್‌ ಕಾಮತ್‌ ಮತ್ತು ಕೃಷ್ಣಯ್ಯ ಶೆಟ್ಟಿ ಕುಟುಂಬ ವರ್ಗದವರು ಪ್ರಶ್ನಾ ಚಿಂತನೆ ಇಟ್ಟು ಅದರ ಅನುಗುಣವಾಗಿ ಆದಿಶಂಕರಾಚಾರ್ಯರು ಕೊಡಚಾದ್ರಿ ಕೊಲ್ಲೂರು ಮಾರ್ಗವಾಗಿ ಬರುವಾಗ ಈ ಸ್ಥಳದಲ್ಲಿ ಅನ್ನಪೂರ್ಣೇಶ್ವರಿಯನ್ನು ಉಪಾಸನೆ ಮಾಡಿರುವ ಹಿನ್ನೆಲೆ ದೊರೆತಿರುವ ಕಾರಣಕ್ಕಾಗಿ ದೇವಿಯ ಸಾನಿಧ್ಯ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದೆ. ಈ ಭಾಗದಲ್ಲಿರುವಂತೆ ದ್ರಾವಿಡ ಶೈಲಿಯಲ್ಲಿ ಶ್ರೀ ಅನ್ನಪೂರ್ಣೆಶ್ವರಿ ದೇವಾಲಯ ನಿರ್ಮಾಣ ಕಾರ್ಯ ದಾನಿಗಳ ಸಹಕಾರದಿಂದ ನಡೆಯುತ್ತಿದೆ. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಒಂದು ಕೋಟಿ ರೂ. ಅನುದಾನವನ್ನು ನೀಡಿರುವುದು ಇಲ್ಲಿನ ವಿಶೇಷ ಎಂದರು.

ವಿಶ್ವನಾಥ ಕಲ್ಗೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಶವ ಆಚಾರ್ಯ ಮೂಡುಬಿದಿರೆ, ಸ್ಥಳದಾನಿಗಳಾದ ಶ್ರೀಧರ ಕಾಮತ್‌, ಕೃಷ್ಣಯ್ಯ ಶೆಟ್ಟಿ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರಮೇಶ್‌ ಆಚಾರ್ಯ, ಸಾಲಿಗ್ರಾಮ ಶ್ರೀದೇವಿ ಪಾತ್ರಿ ರಾಘವೇಂದ್ರ ಆಚಾರ್ಯ, ಸಾಲಿಗ್ರಾಮ ವಿರಾಡಿವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ, ಮಂಗಳೂರು ಎಸ್‌ಕೆ ಗೋಲ್ಡ್‌ಸ್ಮಿತ್‌ ಇಂಡಸ್ಟ್ರೀಯಲ್‌ ಕೋ-ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಉಪೇಂದ್ರ ಆಚಾರ್ಯ, ಶಿವಮೊಗ್ಗ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ನಿರಂಜನ್‌ ಮೂರ್ತಿ ಆಚಾರ್ಯ, ಸಾಲಿಗ್ರಾಮ ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ಯ, ಕೆಂಜೂರು ವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನವೀನ್‌ಚಂದ್ರ ಶೆಟ್ಟಿ, ನಿವೃತ್ತ ಉಪತಹಶೀಲ್ದಾರ ಕೆ. ವಸಂತ್‌, ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಿ ವಿಜೇಂದ್ರ ಆಚಾರ್ಯ, ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಅಧ್ಯಕ್ಷೆ ಜ್ಯೋತಿ ರಮೇಶ್‌ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜೇಶ್‌ ಆಚಾರ್ಯ ಪೆರ್ಡೂರು ಸ್ವಾಗತಿಸಿ, ಚಂದ್ರಶೇಖರ ಆಚಾರ್ಯ ಶಿವಪುರ ನಿರೂಪಿಸಿದರು. ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ ವಂದಿಸಿದರು. ಬಳಿಕ 41ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ 42ನೇ ಬಾರಿಯ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ವತಿಯಿಂದ ಕರ್ಣ ಪರ್ವ ಯಕ್ಷಗಾನ ತಾಳಮದ್ದಳೆ ಜರುಗಿತು.

28ರಂದು ಚಾತುರ್ಮಾಸ್ಯ ಸಮಾರೋಪ

ಕಜ್ಕೆಯಲ್ಲಿರುವ ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಾಖಾ ಮಠದಲ್ಲಿ ನಡೆಯುತ್ತಿರುವ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿಗಳವರ 41ನೇ ಚಾತುರ್ಮಾಸ್ಯ ವ್ರತಾನುಷ್ಠಾನದ ಸಮಾರೋಪ ಕಜ್ಕೆ ಶಾಖಾ ಮಠದಲ್ಲಿ ಸೆ.28 ರಂದು ನಡೆಯಲಿದೆ.
41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಸಮಿತಿಯ ಅಧ್ಯಕ್ಷ ಕಲ್ಗೋಳಿ ವಿಶ್ವನಾಥ ಆಚಾರ್ಯ ಅಧ್ಯಕ್ಷತೆ ವಹಿಸುವರು. ಉಡುಪಿ ಶಾಸಕ ಯಶಪಾಲ್‌ ಸುವರ್ಣ, ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಗೌರವಾಧ್ಯಕ್ಷ ಯುಕೆಎಸ್‌ ಸೀತಾರಾಮ ಆಚಾರ್ಯ, ಮಂಗಳೂರಿನ ಉದ್ಯಮಿ ಮಂಜುನಾಥ ಆಚಾರ್ಯ ಜೆಪ್ಪು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಕಜ್ಕೆ, ಉದ್ಯಮಿ ಕಾಶೀನಾಥ ಶೆಣೈ ಕಜ್ಕೆ, ಬೆಳಗಾಂ ಉದ್ಯಮಿ ಬಾಲಕೃಷ್ಣ ಶೆಟ್ಟಿ, ಕೋಟ ಮಣೂರು ವಿರಾಡ್ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ, ಕೊಕ್ಕರ್ಣೆ ರೋಟರಿ ಅಧ್ಯಕ್ಷ ಸಿಎ.ರಘುರಾಮ್‌ ಕೊಕ್ಕರ್ಣೆ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಗಣೇಶ್‌ ಬಿ., ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ ಕಜ್ಕೆ, ಶ್ರೀಧರ ಕಾಮತ್‌ ಕಜ್ಕೆ, ಕಜ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದ ಬೆಟ್ಟು ರಾಜೇಶ ಆಚಾರ್ಯ ಉಪಸ್ಥಿತರಿರುವರು.

ಸೆ.29ರಂದು ಸೀಮೋಲ್ಲಂಘನ

ಮಹಾಸ್ವಾಮೀಜಿಯವರ 41ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಸಂಪನ್ನದ ಸೀಮೋಲ್ಲಂಘನ ಕೊಕ್ಕರ್ಣೆಯ ಸೀತಾನದಿಯಲ್ಲಿ ಸೆ.29ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕಾಡೂರಿನಿಂದ ಗಣೇಶ ಕಲಾ ಮಂದಿರಕ್ಕೆ ಗುರುಗಳ ಪುರಮೆರವಣಿಗೆ ನಡೆದು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ.
ಕೊಕ್ಕರ್ಣೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ ಪೂಜಾರಿ, ರಾಕೇಶ್‌ ಕೊಕ್ಕರ್ಣೆ ಅರಮನೆ, ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸಂಜೀವ ಪೂಜಾರಿ, ಕೊಕ್ಕರ್ಣೆ ಶರನ್ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಹರೀಶ ಶಾನುಭೋಗ್‌, ಕೊಕ್ಕರ್ಣೆ ಬಬ್ಬುಸ್ವಾಮಿ ದೇವಸ್ಥಾನದ ರಾಮದಾಸ ಗುರಿಕಾರ, ಕಲ್ಮನೆ ಬ್ರಾಹ್ಮರಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಮ ನಾಯ್ಕ್‌, ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಆನಂದ ಮರಕಾಲ, ಕಜ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ ಉಪಸ್ಥಿತರಿರುವರು.







































































error: Content is protected !!
Scroll to Top