ಕಾರ್ಕಳ : ನಗರದ ಜೋಡುರಸ್ತೆಯಲ್ಲಿನ ಎಸ್ಎಸ್‌ಎಸ್ ಕಾಂಪ್ಲೆಕ್ಷ್‌ನ ಮೊದಲನೆ ಮಹಡಿಯಲ್ಲಿ ಎನ್.ಪಿ. ಪ್ರಿಂಟಿಂಗ್ ಸೆ. 17ರಂದು ಶುಭಾರಂಭಗೊಂಡಿತು. ಶಾಸಕ ವಿ. ಸುನಿಲ್ ಕುಮಾರ್ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಡಿಜಿಲೀಕರಣಗೊಳ್ಳುತ್ತಿರುವ ಕಾರ್ಕಳಕ್ಕೆ ಎನ್.ಪಿ. ಪ್ರಿಂಟಿಂಗ್ ಸೆಲ್ಯೂಷನ್ಸ್‌ನಂತಹ ಅಗತ್ಯವಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಜಿಲ್ಲಾ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ವೈ. ಸುಧಾಕರ ಭಟ್, ಎನ್.ಪಿ. ಗ್ರೂಪ್ಸ್‌ನ ಚೇರ್ಮನ್ ವಾಸುದೇವ ಭಟ್ ನೆಕ್ಕರಪಲ್ಕೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೋಡುರಸ್ತೆಯಲ್ಲಿ ಎನ್.ಪಿ. ಪ್ರಿಂಟಿಂಗ್ ಸೊಲ್ಯೂಷನ್ಸ್ ಶುಭಾರಂಭ
