ಕಾರ್ಕಳ : ಉಡುಪಿ ನೆಹರು ಯುವ ಕೇಂದ್ರ ಮತ್ತು ಸಾಣೂರು ಯುವಕ ಮಂಡಲದ ಸಹಯೋಗದಲ್ಲಿ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೆ.15 ರಂದು ಹಿಂದಿ ದಿನಾಚರಣೆ ಕಾರ್ಯಕ್ರಮ ಜರುಗಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಚೇತಾ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಿಂದಿ ದಿನಾಚರಣೆಯ ಸದುದ್ಧೇಶ ತಿಳಿಸಿದರು. ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕಿ ಲಿಬ್ರೇಟ್ ಅವರು ವಿದ್ಯಾರ್ಥಿಗಳಿಗೆ ಹಿಂದಿ ರಸ ಪ್ರಶ್ನೆ ಹಾಗೂ ಹಿಂದಿ ಗಾಯನ ಜ್ಞಾಪಕ ಶಕ್ತಿ ಸ್ಪರ್ಧೆಯನ್ನು ನಡೆಸಿದರು. ವಿಜೇತರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ಗಣೇಶ್ ಮೊಗವೀರ, ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಹಾಗೂ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಲವೀನಾ ಸ್ವಾಗತಿಸಿ, ವಿಮಲಾ ಕಾರ್ಯಕ್ರಮ ನಿರೂಪಿಸಿದರು. ವೃಂದಾ ವಂದಿಸಿದರು.
ಸಾಣೂರು ಪ್ರೌಢಶಾಲೆಯಲ್ಲಿ ಹಿಂದಿ ದಿನಾಚರಣೆ
