ಸಾಣೂರು ಗ್ರಾಪಂಗೆ ಹಿಮಾಚಲ ಪ್ರದೇಶ, ಉತ್ತರಾಖಂಡದ ಎನ್‌ಜಿಒ ಭೇಟಿ

ಎಸ್‌ಎಲ್‌ಆರ್‌ಎಂ ತ್ಯಾಜ್ಯ ನಿರ್ವಹಣೆ ಅಧ್ಯಯನ

ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್‌ ಘನ ದ್ರವ ಸಂಪನ್ಮೂಲ ಘಟಕ(ಎಸ್‌ಎಲ್‌ಆರ್‌ಎಂ) ಹಾಗೂ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವಚ್ಛತಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟ್ರ ಗಮನ ಸೆಳೆದಿದೆ. ಸ್ವಚ್ಛತಾ ನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ಸ್ಪರ್ಧೆಗೆ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ 3 ಪಂಚಾಯತ್‌ಗಳಲ್ಲಿ ಸಾಣೂರು ಕೂಡ ಒಂದು.
ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಲು ಬೆಂಗಳೂರಿನ ಸಾಹಸ್ ಎಂಬ ಎನ್‌ಜಿಒ ವಿಶೇಷ ಸಹಕಾರ ನೀಡಿದ್ದು, ಇದೀಗ ಹಿಮಾಚಲ ಹಾಗೂ ಉತ್ತರಾಖಂಡದ ಎನ್‌ಜಿಒ ಸ್ವಯಂಸೇವಕರು ಸ್ಥಳೀಯ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದು ಎಸ್‌ಎಲ್‌ಆರ್‌ಎಂ ಘಟಕಕ್ಕೆ ಹಾಗೂ ಕೆಲವು ಮನೆಗಳಿಗೆ ಭೇಟಿ ನೀಡಿದ್ದಾರೆ.
ಪಂಚಾಯತ್‌ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಖಾ ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ಕರುಣಾಕರ್ ಎಸ್. ಕೋಟ್ಯಾನ್ ಹಾಗೂ ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಪ್ರವೀಣ್ ಕೋಟ್ಯಾನ್ ಹಾಗೂ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಮಾಹಿತಿ ವಿನಿಮಯ ನಡೆಸಿದರು. ಪಂಚಾಯತ್ ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಕಾರ್ಯದರ್ಶಿ ಸವಿತಾ ಪ್ರಭು, ಸದಸ್ಯರಾದ ಸತೀಶ್, ಸುಮತಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಾಹಸ್ ಸಂಸ್ಥೆಯ ಪ್ರಮುಖರಾದ ಕಾರ್ತಿಕ್ ಹಾಗೂ ಅವಿನಾಶ್ ಕಾರ್ಯಕ್ರಮದ ನೇತೃತ್ವ ವಹಿಸಿ ತಂಡಕ್ಕೆ ಮಾರ್ಗದರ್ಶನ ನೀಡಿದರು.error: Content is protected !!
Scroll to Top